ದಾಂಡೇಲಿ ವನ್ಯಜೀವಿ ಕಚೇರಿಯಲ್ಲಿನ ತುರ್ತು ಸೇವೆಗೆ ಮೀಸಲಿದ್ದ ಆಂಬುಲೆನ್ಸ್’ನ್ನು ಅರಣ್ಯ ಸಿಬ್ಬಂದಿ ತಮ್ಮ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಬಳಸುತ್ತಿದ್ದು, ಸಂಚಾರಿ ನಿಯಮ ಉಲ್ಲಂಗಿಸಿರುವ ಆರೋಪ ಕೇಳಿ ಬಂದಿದೆ. ಇನ್ನೂ ಈ ವಾಹನದ ಮೇಲೆ `ಕರ್ನಾಟಕ ಸರ್ಕಾರ’ ಎಂದು ಬರೆದು, ಶಾಲಾ ವಾಹನ ಎಂದೂ ಬರೆದಿರುವುದು ವಿಶೇಷವಾಗಿದೆ.
ಶಾಲಾ ಮಕ್ಕಳನ್ನು ಕರೆದೊಯ್ಯಲು ಹಳದಿ ಬಣ್ಣದ ನೋಂದಣಿ ಸಂಖ್ಯೆಯ ವಾಹನಗಳನ್ನು ಬಳಸಬೇಕು. ಆದರೆ, ಇಲ್ಲಿ ಬಿಳಿ ಬಣ್ಣದ ಅದರಲ್ಲಿಯೂ ಅರಣ್ಯ ಇಲಾಖೆಯ ವಾಹನ ಬಳಸಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. `ತುರ್ತು ಸನ್ನಿವೇಶದಲ್ಲಿ ಬಳಸಬೇಕಿದ್ದ ಆಂಬುಲೆನ್ಸ್’ನ್ನು ಈ ರೀತಿ ಬಳಸುವುದು ಸರಿಯಲ್ಲ. ಜೊತೆಗೆ ಆ ವಾಹನವನ್ನು ನೈಜ ಸೇವೆಯಿಂದ ದೂರ ಮಾಡಿರುವುದು ತಪ್ಪು’ ಎಂಬುದು ಹಲವರ ಅಭಿಪ್ರಾಯ. ಇನ್ನೂ ಸಾರಿಗೆ ಅಧಿಕಾರಿಗಳು ವೈಟ್ ಬೋರ್ಡ ವಾಹನದಲ್ಲಿ ಶಾಲಾ ಮಕ್ಕಳನ್ನು ಓಡಾಡಿಸಿದರೆ ದಂಡ ವಿಧಿಸುತ್ತಾರೆ. ಆದರೆ, ಅರಣ್ಯ ಇಲಾಖೆಯವರ ಈ ಕೆಲಸವನ್ನು ಅವರು ನೋಡಿಯೂ ಸುಮ್ಮನ್ನಿದ್ದಾರೆ ವೈಟ್ ಬೋರ್ಡ ನೊಂದಣಿಯ ವಾಹನದಲ್ಲಿ ಮಕ್ಕಳನ್ನು ಕರೆದೊಯ್ಯುವಾಗ ಅನಾಹುತ ನಡೆದರೆ ಇದಕ್ಕೆ ಯಾರು ಹೊಣೆ?’ ಎಂದು ಅನೇಕರು ಪ್ರಶ್ನಿಸಿದ್ದಾರೆ. `ಆಂಬುಲೆನ್ಸ್ನ್ನು ಈ ರೀತಿ ಉಪಯೋಗಿಸುವುದರಿಂದ ಆಟೋ ಚಾಲಕರ ಉದ್ದಿಮೆಗೂ ತೊಂದರೆಯಾಗಿದೆ’ ಎಂದು ಆಟೋ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಾಬಾಸಾಬ ಜಮಾದಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.




Discussion about this post