ಸಿದ್ದಾಪುರ: ಬಿಳೆಕಲ್ಲು ಗ್ರಾಮದ ಆದಿತ್ಯ ಹೆಗಡೆ (27) ಎಂಬಾತರು ವಾಟ್ಸಪ್ ಮೆಸೆಜ್ ನಂಬಿ ತನ್ನ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಕಳೆದುಕೊಂಡಿದ್ದಾರೆ. ಲೈಕ್ ಮಾಡಿದರೆ ಹಣ ಬರುತ್ತದೆ ಎಂಬ ಸಂದೇಶ ನಂಬಿದ ಅವರು ವಂಚಕರ ಖಾತೆಗೆ 7.78 ಲಕ್ಷ ರೂ ಹಣ ವರ್ಗಾಯಿಸಿದ್ದಾರೆ. ಕಂಪನಿಯೊAದರ ಉತ್ಪನ್ನಗಳ ಕುರಿತು ಅಭಿಪ್ರಾಯ ಬರೆದರೆ, ಒಳ್ಳೆಯ ಆದಾಯ ಬರುತ್ತದೆ ಎಂದು ನಂಬಿಸಿ ವಂಚಕರು ಆದಿತ್ಯ ಹೆಗಡೆ ಅವರಿಂದ ಹಣ ಪಡೆದಿದ್ದು, ಇನ್ನೂ 20 ಲಕ್ಷ ರೂ ನೀಡುವಂತೆ ಒತ್ತಾಯಿಸಿದ್ದಾರೆ. ಮೋಸ ಹೋದದನ್ನು ಅರಿತ ಅವರು ಇದೀಗ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ.
ವಾಟ್ಸಪ್ ನಂಬಿ ಹಣ ಕಳೆದುಕೊಂಡ ಲೆಕ್ಕಾಧಿಕಾರಿ

Leave a comment