ಶಿರಸಿಯಲ್ಲಿ ನಡೆದ `ಕಾಫಿ ಮತ್ತು ಕಾಳುಮೆಣಸು’ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿಜ್ಞಾನಿ ಡಾ ಹರ್ಷ ಮಾತನಾಡಿ `ಶಿರಸಿಯ ಕೆಲವು ಭಾಗಗಳಲ್ಲಿ ಈಗಾಗಲೇ ಚಂದ್ರಗಿರಿ ಕಾಫಿಯನ್ನು ಯಶಸ್ವಿಯಾಗಿ ಬೆಳೆಯಲಾಗಿದೆ. ಚಿಕ್ಕಮಂಗಳೂರಿನಲ್ಲಿ ಬೆಳೆಯುವ ಗುಣಮಟ್ಟವನ್ನು ಇದು ಕಾಯ್ದುಕೊಂಡಿದ್ದು, ಅಲ್ಲಿನ ಕಾಫಿ ಬೆಳೆಗೆ ಸರಿಸಾಟಿಯಾಗಿ ಇಲ್ಲಿ ಈ ಬೆಳೆ ಬೆಳೆಯಲು ಸಾಧ್ಯ’ ಎಂದರು. ಇದಕ್ಕೆ ಸಂಬoಧಿಸಿದ ದಾಖಲೆ ಹಾಗೂ ಅಂಕಿ-ಸoಖ್ಯೆಗಳನ್ನು ಬಿಚ್ಚಿಟ್ಟರು. ಚಂದ್ರಗಿರಿ ಕಾಫಿಯ ಗುಣ ವಿಶೇಷತೆಗಳನ್ನು ಅವರು ತಿಳಿಸಿದರು.
ವಿಷಯ ತಜ್ಞರಾಗಿ ಭಾಗವಹಿಸಿದ್ದ ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ ಜೆ.ಎಸ್. ನಾಗರಾಜ ಪರ್ಯಾಯ ಬೆಳೆಗೆ ರೈತರನ್ನು ಉತ್ತೇಜಿಸಿದರು. `ಅಡಿಕೆ ಬೆಳೆಗೆ ಉಪಬೆಳೆಯಾಗಿ ಕಾಳುಮೆಣಸು ಮತ್ತು ಕಾಫಿ ಬೆಳೆ ಪದ್ಧತಿಗೆ ಒತ್ತು ಕೊಡಬೇಕು. ನಮ್ಮ ದೇಶದ ಕಾಫಿ ಉತ್ಪಾದನೆಯಲ್ಲಿ ಶೇ 70ರಷ್ಟು ಹೊರ ದೇಶಗಳಿಗೆ ರಫ್ತಾಗುತ್ತಿದೆ. ಹೀಗಾಗಿ ಇದಕ್ಕೆ ಭವಿಷ್ಯವಿದೆ’ ಎಂದರು.
Discussion about this post