ಭಟ್ಕಳ: ಶಿವಮೊಗ್ಗದ ಶಿಖಾರಿಪುರದಿಂದ ಭಿಕ್ಷೆ ಬೇಡಲು ಭಟ್ಕಳಕ್ಕೆ ಬಂದಿದ್ದ ರೆಹಮದ್ದುಲ್ಲಾ ಎಂಬಾತ ಸಾವನಪ್ಪಿದ್ದಾನೆ.
65 ವರ್ಷದ ಈತ ಜುಲೈ 3ರಂದು ಈತ ಹಳೆ ಬಸ್ ನಿಲ್ದಾಣದ ಬೃಂಧಾವನ ಜ್ಯುವೆಲರ್ ಬಳಿ ಬಿದ್ದಿದ್ದ. ತೀವೃ ಅಸ್ವಸ್ಥಗೊಂಡಿದ್ದ ಆತನನ್ನು ರಿಕ್ಷಾ ಚಾಲಕ ಪದ್ದಯ್ಯ ದೇವಾಡಿಗ ನೀರು ಆಹಾರ ನೀಡಿ ಉಪಚರಿಸಿದ್ದ. ಜುಲೈ 4ರ ಬೆಳಗ್ಗೆ ಮತ್ತೆ ಅಲ್ಲಿಗೆ ತೆರಳಿ ನೋಡಿದಾಗ ಆತ ಸಾವನಪ್ಪಿದ್ದ. ಯಾವುದೋ ಖಾಯಿಲೆಯಿಂದ ಆತ ಸಾವನಪ್ಪಿರುವ ಬಗ್ಗೆ ಪದ್ದಯ್ಯ ಶಂಕಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಾಗಿದೆ.
ಭಿಕ್ಷೆ ಬೇಡಿ ಭಟ್ಕಳಕ್ಕೆ ಬಂದವ ಶವವಾದ!

Leave a comment