ದಾಂಡೇಲಿಯಲ್ಲಿರುವ ಬಿ ಎಸ್ ಎನ್ ಎಲ್ ಕೇಂದ್ರಕ್ಕೆ ಬೀಗ ಜಡಿಯಲಾಗಿದ್ದು, ಈ ಬಗ್ಗೆ ಜನಾಕ್ರೋಶ ವ್ಯಕ್ತವಾಗಿದೆ. ಇಲ್ಲಿ ಸೇವೆ ಲಭ್ಯವಿಲ್ಲದ ಕಾರಣ ಜನ ಸಣ್ಣ-ಪುಟ್ಟ ಕೆಲಸಗಳಿಗೂ ಹಳಿಯಾಳಕ್ಕೆ ತೆರಳಬೇಕಿದೆ.
ಮೊದಲು 10 ಸಿಬ್ಬಂದಿ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ನಂತರ ಅದರ ಸಂಖ್ಯೆ 2ಕ್ಕೆ ಇಳಿದಿದ್ದು, ಇದೀಗ ಪೂರ್ತಿಯಾಗಿ ಕಚೇರಿಯೇ ಬಂದ್ ಆಗಿದೆ. ಇದರಿಂದ BSNL ಕಂಪನಿಯ ಸಿಮ್ ಬೇಕಾದರೂ ಸಹ ಗ್ರಾಹಕರು ಹಳಿಯಾಳ ಪಟ್ಟಣಕ್ಕೆ ಹೋಗಬೇಕಿದೆ. ದಾಂಡೇಲಿಯಲ್ಲಿ ಸೇವಾ ಕೇಂದ್ರ ಇಲ್ಲದ ಕಾರಣ ಗ್ರಾಹಕರು ಬಿಲ್ ಪಾವತಿಗೆ ಸಹ ಹಳಿಯಾಳಕ್ಕೆ ಹೋಗುವುದು ಅನಿವಾರ್ಯ.
Discussion about this post