ಮುಂಡಗೋಡ: ಜುಲೈ 19ರಂದು ಮುಂಡಗೋಡಿಗೆ ಲೋಕಾಯುಕ್ತ ಅಧಿಕಾರಿಗಳು ಆಗಮಿಸಲಿದ್ದು, ಸರ್ಕಾರಿ ನೌಕರರಿಂದ ಆಗುವ ಸಮಸ್ಯೆಗಳ ಬಗ್ಗೆ ಜನ ಅವರಲ್ಲಿ ದೂರಬಹುದು.
ಜುಲೈ 19ರಂದು ಬೆಳಿಗ್ಗೆ 11 ಗಂಟೆಯಿoದ ಮಧ್ಯಾಹ್ನ 1 ಗಂಟೆಯವರೆಗೆ ಮುಂಡಗೋಡ ತಹಶೀಲ್ದಾರ ಕಚೇರಿಯ ಸಭಾ ಭವನ ಅವರು ಅಹವಾಲು ಆಲಿಸಲಿದ್ದರೆ. ಸರ್ಕಾರಿ ನೌಕರರು ಆದಾಯಕ್ಕೂ ಮೀರಿ ಆಸ್ತಿಗಳಿಸಿದ್ದರೆ, ಕೆಲಸ ಮಾಡಿಕೊಡಲು ಹಣ ಕೇಳುತ್ತಿದ್ದರೆ ಅಥವಾ ಅನಗತ್ಯವಾಗಿ ತೊಂದರೆ ಕೊಡುತ್ತಿದ್ದರೆ ಇಲ್ಲಿ ದೂರು ಕೊಡಿ.
ಕರ್ತವ್ಯ ಲೋಪ, ಕಳಪೆ ಕಾಮಗಾರಿ ವಿರುದ್ಧ ಸಹ ದೂರಬಹುದು. ಅಧಿಕಾರಿಗಳ ಮುಂದೆ ದೂರಲು ಇಷ್ಟವಿಲ್ಲ ಎಂದಾದಲ್ಲಿ ಕಚೇರಿ ಅವಧಿಯಲ್ಲಿ 295293, 220198, 222250, 222022 ಹಾಗೂ 229988ಗೆ (ಕಾರವಾರದ ಕೋಡ್ 08382) ಫೋನ್ ಮಾಡಿ, ವೈಯಕ್ತಿಕ ಭೇಟಿಗೆ ಸಮಯ ಪಡೆದು ದೂರು ನೀಡಲು ಅವಕಾಶವಿದೆ.
Discussion about this post