ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದ್ದು, ಅಘನಾಶಿನಿ ನದಿ ತೀರದ ಜನ ಆತಂಕದಲ್ಲಿದ್ದಾರೆ. ಗಂಗಾವಳಿ ಕೊಳ್ಳದ ಜನ ಸಹ ನೀರಿನ ಆರ್ಭಟಕ್ಕೆ ನಲುಗಿದ್ದು, ಜನಜೀವನದ ಬಗ್ಗೆ ಚಿಂತೆಯಲ್ಲಿದ್ದಾರೆ.
ಧಾರಾಕಾರ ಮಳೆಗೆ ಗಂಗಾವಳಿ ನದಿ ಉಕ್ಕಿ ಹರಿಯುತ್ತಿದೆ. ಹುಬ್ಬಳ್ಳಿ ಭಾಗದ ನೀರು ಗಂಗಾವಳಿ ಮೂಲಕ ಹರಿದು ಈಗಾಗಲೇ ಫಣಸಗುಳಿ ಸೇತುವೆಯನ್ನು ಮುಳುಗಿಸಿದೆ. ಈ ಭಾಗದಲ್ಲಿ ಸಂಚಾರ ನಿಷೇಧಿಸಿದ್ದು, ಇದೀಗ ಅಲ್ಪ ಪ್ರಮಾಣದಲ್ಲಿ ಮಳೆ ಕಡಿಮೆಯಾಗಿದ್ದರೂ ಆತಂಕ ಮಾತ್ರ ದೂರವಾಗಿಲ್ಲ. ಈ ಹಿನ್ನಲೆ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಡಳಿತ `ಎಲ್ಲಾ ಅಧಿಕಾರಿಗಲು ಕೇಂದ್ರ ಸ್ಥಾನದಲ್ಲಿರಬೇಕು’ ಎಂದು ಸೂಚಿಸಿದೆ. ನೆರೆ ಪ್ರವಾಹ ಉಂಟಾದ ಪ್ರದೇಶದಲ್ಲಿ ಮುತುವರ್ಜಿಯಿಂದ ಕಾಳಜಿ ಕೇಂದ್ರ ತೆರೆಯಲು ಸೂಚಿಸಲಾಗಿದೆ.
Discussion about this post