`ಸಾರ್ವಜನಿಕ ಕೆಲಸ ಮಾಡಲು ಸರ್ಕಾರದ ಬಳಿ ಹಣ ಇಲ್ಲದಿದ್ದರೆ ವೈಯಕ್ತಿಕ ಹಣ ವಿನಿಯೋಗಿಸಿ ಜನರ ಸೇವೆ ಮಾಡುವೆ’ ಎಂದು ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ.
ಹೊನ್ನಾವರದಲ್ಲಿ ಮಾತನಾಡಿದ ಅವರು `ಸಾರ್ವಜನಿಕರ ಕೆಲಸ ಮಾಡಲು ಸರ್ಕಾರದಿಂದ ಅನುದಾನವಿಲ್ಲದಿದ್ದರೆ ಅದನ್ನು ಅಧಿಕಾರಿಗಳು ತಿಳಿಸಬೇಕು. ಅನುದಾನ ಇದ್ದರೂ ಕೆಲಸ ಮಾಡದೇ ಇದ್ದರೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಬೇಕಾಗುತ್ತದೆ’ ಎಂದವರು ಎಚ್ಚರಿಸಿದರು. `ಸಾರ್ವಜನಿಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಶಾಸಕರು, ಸಚಿವರು ಜನರ ಮನೆ ಬಾಗಿಲಿಗೆ ಹೋಗುತ್ತಿದ್ದಾರೆ. ಅಧಿಕಾರಿಗಳು ಸಹ ಸಾಮಾನ್ಯ ಜನರ ಬಳಿ ಹೋಗಬೇಕು. ಅವರ ಸಮಸ್ಯೆಗೆ ಸ್ಪಂದಿಸಬೇಕು. ಈ ಬಗ್ಗೆ ದೂರು ಬರಬಾರದು’ ಎಂದು ಸೂಚಿಸಿದರು.
Discussion about this post