ಶಿರಸಿ: ಹುಸೇರಿ ರಸ್ತೆಯ ಗಾಯಗುಡ್ಡೆಯ ಬಳಿ ಬೈಕ್ ಮೇಲೆ ತೆರಳುತ್ತಿದ್ದ ಮೂವರಿಗೆ ಜೆಸಿಬಿ ಗುದ್ದಿದೆ. ಯಾಕೂಬ ಅಬ್ದುಲ್ ಖಾದರ್ ಎಂಬಾತ ತನ್ನ ಮಗಳು ಹಾಗೂ ಮೊಮ್ಮಗಳ ಜೊತೆ ಬೈಕಿನಲ್ಲಿ ಸಂಚರಿಸುತ್ತಿದ್ದ. ಆಗ, ವಿನಾಯಕ ಹನುಮಂತ ನಾಯ್ಕ ಎಂಬಾತ ಚಲಾಯಿಸಿಕೊಂಡು ಬಂದ ಜೆಸಿಬಿ ಇವರ ಬೈಕಿಗೆ ಗುದ್ದಿದ್ದು, ಇಬ್ಬರಿಗೆ ಗಾಯವಾಗಿದೆ. ಗಾಯಗೊಂಡ ಬಶೀರಾ ಹಾಗೂ ಶಾಹೀರಾ ಅನಾರೋಗ್ಯಕ್ಕೀಡಾಗಿದ್ದು, ಅವರನ್ನು ಟಿಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರು ಮಂದಿ ಪ್ರಯಾಣಿಸುತ್ತಿದ್ದ ಬೈಕ್ ಚಾಲಕನ ಮೇಲೆ ಪ್ರಕರಣ ದಾಖಲಾಗಿಲ್ಲ. ಬೈಕಿಗೆ ಜೆಸಿಬಿ ಗುದ್ದಿದ ವಿನಾಯಕ ನಾಯ್ಕ ಮೇಲೆ ಕ್ರಮ ಕೈಗೊಳ್ಳುವಂತೆ ಯಾಕೂಬ ಅಬ್ದುಲ್ ಖಾದರ್ ಪೊಲೀಸ್ ದೂರು ನೀಡಿದ್ದಾರೆ.
Discussion about this post