ಕಾರವಾರ: ಬಿಣಗಾದ ಚರ್ಚ ರಸ್ತೆಯಲ್ಲಿ ವಾಸವಾಗಿದ್ದ ಮೂವರು ಮಾನಸಿಕ ಅಸ್ವಸ್ಥರಲ್ಲಿ ಒಬ್ಬ ಸಾವನಪ್ಪಿದ್ದಾನೆ.
ಕೃಷ್ಣ ಪೆಡ್ನೇಕರ್ ಎಂಬಾತ ಮೂರ್ಚೆ ತಪ್ಪಿ ಬಿದ್ದು ಸಾವನಪ್ಪಿದ್ದು, ಈತನ ಇಬ್ಬರು ಸಹೋದರರು ಸಹ ಮಾನಸಿಕ ಅಸ್ವಸ್ಥರು. ಈ ಮೂವರು ನಿತ್ಯ ಎಲ್ಲೆಂದರಲ್ಲಿ ತಿರುಗಾಡುತ್ತಿದ್ದರು. ಇವರಿಗೆ ತಂದೆ-ತಾಯಿ ಇರಲಿಲ್ಲ. ಹೀಗಿರುವಾಗ ಕೃಷ್ಣ ಪೆಡ್ನೇಕರ್ ಜೂ 2ರಂದು ತಲೆತಿರುಗಿ ಬಂದು ಬಿದ್ದಿದ್ದು, 108 ಆಂಬುಲೈನ್ಸ್ ಮೂಲಕ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿಯೇ ಆತ ಸಾವನಪ್ಪಿದ್ದಾನೆ. ಜಿಲ್ಲಾ ಆಸ್ಪತ್ರೆಯಲ್ಲಿ ಆತನ ಶವವನ್ನು ಇರಿಸಲಾಗಿದೆ.
Discussion about this post