ಉತ್ತರ ಕನ್ನಡ ಜಿಲ್ಲೆಯ ಕೆಲ ಪ್ರವಾಸಿ ತಾಣಗಳಿಗೆ ನಿಷೇಧ ಹೇರಿದರೂ ಮಳೆಗಾಲ ಅನುಭವಿಸಲು ಆಗಮಿಸುವವರ ಸಂಖ್ಯೆ ಕಡಿಮೆ ಆಗಿಲ್ಲ. ಕರಾವಳಿ ಭಾಗದಲ್ಲಿನ ಕಡಲು ಹಾಗೂ ಮಳೆ ನೋಡಲು ಬರುವವರು `ಸೆಲ್ಪಿ’ ಮೋಡಿಗೆ ಸಿಲುಕಿ ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ.
ಕಡಲತೀರಗಳ ಅಂಚಿನಲ್ಲಿರುವ ಬಂಡೆಗಳು ಪ್ರಸ್ತುತ ಸನ್ನಿವೇಶದಲ್ಲಿ ಅತ್ಯಂತ ಅಪಾಯಕಾರಿ. ಅಲ್ಲಿ ತೆರಳುವವರು ಕಾಲು ಜಾರಿ ಸಮುದ್ರಕ್ಕೆ ಬೀಳುವ ಸಾಧ್ಯತೆ ಹೆಚ್ಚು. ಹೀಗಿರುವಾಗ ಸಾಹಸದಿಂದ ಕಲ್ಪಂಡೆಗಳ ಮೇಲೆ ಹತ್ತಿ ಸೆಲ್ಪಿಗಾಗಿ ಮೈ ಮರೆಯುವುದು ಈ ವೇಳೆ ಸೂಕ್ತವಲ್ಲ.
ಬಹುತೇಕ ಪ್ರವಾಸಿ ತಾಣಗಳಲ್ಲಿ ಜೀವ ರಕ್ಷಕ ಸಿಬ್ಬಂದಿ ಇದ್ದಾರೆ. ಅವರಿಲ್ಲದಿದ್ದರೂ ಅಪಾಯಕಾರಿ ಎಂಬ ನಾಮಫಲಕಗಳಿವೆ. ಅದೂ ಇಲ್ಲ ಎಂದಾದರೆ, ಅಲ್ಲಿಗೆ ಹೋಗಬೇಡಿ ಎಂದೇ ಅರ್ಥ! ಹೀಗಿದ್ದರೂ ಅಂಥ ಪ್ರದೇಶಗಳಿಗೆ ಹೋಗಿ ಜಾರಿ ಬಿದ್ದರೆ ರಕ್ಷಣೆ ಅಸಾಧ್ಯ. ಹೀಗಾಗಿ ಮಳೆಗಾಲದ ಮುನ್ನಚ್ಚರಿಕೆಗಳು ಸದಾ ಅರಿವಿರಲಿ…
Discussion about this post