ಅವೈಜ್ಞಾನಿಕ ಕಾಮಗಾರಿ, ಅಕ್ರಮ ಗಣಿಗಾರಿಕೆ, ಅಪಘಾತ, ದುಬಾರಿಯಾದ ಟೋಲ್ ಶುಲ್ಕ, ಗುಡ್ಡ ಕುಸಿತ, ಸರಿಯಾದ ಸೇವೆ ನೀಡದಿರುವಿಕೆ ಸೇರಿ ರಾಷ್ಟ್ರೀಯ ಹೆದ್ದಾರಿ – 66 ಅಗಲೀಕರಣ ಹೊಣೆ ಹೊತ್ತ ಐ ಆರ್ ಬಿ ಕಂಪನಿ ವಿರುದ್ಧ ನೂರಾರು ಆರೋಪಗಳಿವೆ. ಈ ಎಲ್ಲದರ ನಡುವೆ 10 ವರ್ಷ ಕಳೆದರೂ ಈ ಕಂಪನಿ ಚತುಷ್ಪದ ಹೆದ್ದಾರಿ ನಿರ್ಮಿಸುವಲ್ಲಿ ವಿಫಲವಾಗಿದೆ.
ಅವೈಜ್ಞಾನಿಕ ಕಾಮಗಾರಿಗೆ ನೂರಾರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿ ದಿನ ಒಂದೊoದು ಕಡೆ ಅಪಘಾತವಾಗುತ್ತಿದೆ. ಜಿಲ್ಲೆಯ ಭಟ್ಕಳದಿಂದ ಹಿಡಿದು ಕಾರವಾರದ ಮಾಜಾಳಿ ಗಡಿಯವರೆಗೆ ಸಾಗಿರುವ ಹೆದ್ದಾರಿ 66ರ ಅಗಲೀಕರಣ 2013ರಲ್ಲಿಯೇ ಪ್ರಾರಂಭವಾಗಿದ್ದರೂ ಇನ್ನೂ ಮುಗಿದಿಲ್ಲ.
ಎಲ್ಲೆಂದರಲ್ಲಿ ಡಿವೈಡರ್, ಸರಿಯಾದ ಕಾಮಗಾರಿ ಮುಗಿಸದೇ ಇರುವುದು, ಸರ್ವಿಸ್ ರಸ್ತೆಗಳನ್ನ ಸರಿಯಾಗಿ ಮಾಡದೇ ಇರುವುದು ಜನ ಸಾಮಾನ್ಯರಿಗೂ ಕಾಣುವ ಹಾಗಿದೆ. ಇದಲ್ಲದೇ ರಸ್ತೆಯಲ್ಲಿ ಹಲವೆಡೆ ನೀರು ಸಾಗಲು ಸರಿಯಾದ ಜಾಗವೇ ಇಲ್ಲ. ಇದರಿಂದ ಪ್ರತಿ ವರ್ಷದ ಮಳೆಗಾಲದಲ್ಲಿಯೂ ಕೃತಕ ನೆರೆ ಉಂಟಾಗುತ್ತಿದೆ. ಇಷ್ಟೆಲ್ಲ ಅವಾಂತರ ನಡೆಯುತ್ತಿದ್ದರೂ ಟೋಲ್ ಸಂಗ್ರಹ ಮಾತ್ರ ನಿಂತಿಲ್ಲ. ಜಿಲ್ಲೆಯ 2 ಕಡೆ ದುಬಾರಿ ಟೋಲ್ ಕೊಟ್ಟು ಜನ ಅಸ್ತವ್ಯಸ್ಥ ಹೆದ್ದಾರಿ ಪ್ರಯಾಣ ಮಾಡುತ್ತಿದ್ದಾರೆ.
Discussion about this post