ಕರಾವಳಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪದವನ್ನಾಗಿಸುವ ಕಾರ್ಯದಲ್ಲಿ ಹಲವು ಗುತ್ತಿಗೆ ಪಡೆದ ಐ ಆರ್ ಬಿ ಕಂಪನಿ ಹಲವು ಕಡೆ ಅವೈಜ್ಞಾನಿಕ ವಿಧಾನ ಅನುಸರಿಸಿದ್ದು, ಇದರ ಪರಿಣಾಮ ಭಟ್ಕಳದಲ್ಲಿ ದೇವಾಲಯದ ಗರ್ಭಗುಡಿ ಕುಸಿದಿದೆ.
ಕ್ವಾಲಿಟಿ ಹೊಟೇಲ್ ತಿರುವಿನ ಬಳಿ ಕೋರಗರ ಕೇರಿಯಲ್ಲಿದ್ದ ಕೋಟ ಜಟಕೇಶ್ವರ ದೇವಸ್ಥಾನ ಹಂತ ಹಂತವಾಗಿ ಕುಸಿಯುತ್ತಿದ್ದು, ಗರ್ಭಗುಡಿಯ ಪ್ರದೇಶ ನೆಲಕಚ್ಚಿದೆ. ಆದರೆ, ಈವರೆಗೂ ಹೆದ್ದಾರಿಗೆ ಸಂಬoಧಿಸಿದ ಯಾರೊಬ್ಬರೂ ಇಲ್ಲಿ ಬಂದಿಲ್ಲ.
ಹೆದ್ದಾರಿ ವಿಸ್ತರಣೆಗಾಗಿ ಕೋಟ ಜಟಕೇಶ್ವರ ದೇವಸ್ಥಾನ ತೆರವು ಮಾಡಲಾಗಿದ್ದು, ಸ್ಥಳೀಯರೇ ಸಣ್ಣ ಕಟ್ಟಡದಲ್ಲಿ ದೇವರನ್ನು ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಿ ಹೊಸ ದೇವಸ್ಥಾನ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದರು. ಆದರೆ, ಇದೀಗ ದೇವರನ್ನು ಇಟ್ಟಿದ್ದ ಕೋಣೆ ಸಹ ನೀರುಪಾಲಾಗಿದೆ.
ಶಾಲೆಗೂ ಕಾದಿದೆ ಆಪತ್ತು:
ದೇವಾಲಯದ ಪಕ್ಕದಲ್ಲಿರುವ ಪ್ರಾಥಮಿಕ ಶಾಲೆ ಸಹ ಕುಸಿಯುವ ಹಂತ ತಲುಪಿದೆ. ಶಾಲೆಯಲ್ಲಿ 30 ವಿದ್ಯಾರ್ಥಿಗಳಿದ್ದು, ಶಾಲಾ ಅವಧಿಯಲ್ಲಿ ಭಯದಲ್ಲಿಯೇ ಪಾಠ ಕೇಳುತ್ತಾರೆ. ಶಾಲೆಗೆ ಅಪಾಯ ಇರುವ ಬಗ್ಗೆ ಎಲ್ಲಡೆ ಅರ್ಜಿ ಸಲ್ಲಿಸಿದರೂ ಅವರ ಮನವಿಯನ್ನು ಯಾರೂ ಆಲಿಸಿಲ್ಲ. ಕೇಂದ್ರ ಸಚಿವರ ಆಪ್ತ ಬಣದಲ್ಲಿದ್ದವರು ಐ ಆರ್ ಬಿ ಕಂಪನಿಯ ಒಡೆತನ ಹೊಂದಿದ್ದು, ಪ್ರಭಾವಿಗಳನ್ನು ಪ್ರಶ್ನಿಸಿ, ಸಮಸ್ಯೆಯ ಬಗ್ಗೆ ಅವರಿಗೆ ಮನವರಿಕೆ ಮಾಡಲು ಇಲ್ಲಿನವರಿಗೆ ಸಾಧ್ಯವಾಗುತ್ತಿಲ್ಲ.
Discussion about this post