ಸುರಿಯುತ್ತಿರುವ ಮಳೆಯಿಂದಾಗಿ ಕಾಳಿ ನದಿ ನೀರು ಹೆಚ್ಚಳವಾಗಿದ್ದು, ಒಳ ಹರಿವು ಅತ್ಯಧಿಕವಾಗಿರುವ ಕಾರಣ ಸೋಮವಾರ ಕಾರವಾರದ ಕದ್ರಾ ಅಣೆಕಟ್ಟಿನಿಂದ ನೀರು ಹೊರಬಿಡಲಾಗಿದೆ.
ಶುಕ್ರವಾರ ಮಧ್ಯಾಹ್ನ ಹೆಚ್ಚುವರಿಯಾಗಿದ್ದ 6 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿತ್ತು. ಆ ವೇಳೆ ವಿದ್ಯುತ್ ಉತ್ಪಾದನೆ ನಂತರ ಮತ್ತೆ 22 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿತ್ತು. ಇದೀಗ ಸೋಮವಾರ ಮತ್ತೆ ನಾಲ್ಕು ಗೇಟುಗಳಿಂದ 10600 ಕ್ಯೂಸೆಕ್ ನೀರನ್ನು ಹೆಚ್ಚುವರಿಯಾಗಿ ಹೊರಬಿಡಲಾಗಿದೆ. ಕದ್ರಾ ಅಣೆಕಟ್ಟಿನ ನೀರಿನ ಒಳಹರಿವು 22 ಸಾವಿರ ಕ್ಯೂಸೆಕ್ ಆಗಿದ್ದು, ವಿದ್ಯುತ್ ಉತ್ಪಾದನೆ ನಂತರ ಒಟ್ಟು 31 ಸಾವಿರ ಕ್ಯೂಸೆಕ್ ನೀರು ನಾಲ್ಕು ಅಣೆಕಟ್ಟಿನಿಂದ ಹೊರ ಬಿದ್ದಿದೆ.
Discussion about this post