ದಾಂಡೇಲಿ: ವಿವಿಧ ಅಂಗಡಿಗಳ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಪ್ಲಾಸ್ಟಿಕ್ ಬಳಸುತ್ತಿದ್ದವರಿಂದ ದಂಡ ವಸೂಲಿ ಮಾಡಿ, ಅರಿವು ಮೂಡಿಸಿದರು.
ಮಂಗಳವಾರ ಏಕಕಾಲಕ್ಕೆ ದಾಳಿ ನಡೆಸಿದ್ದು, 125 ಕೆಜಿಗೂ ಅಧಿಕ ನಿಷೇಧಿತ ಪ್ಲಾಸ್ಟಿಕ್ ದೊರೆತಿದೆ. ಏಕಬಳಕೆಯ ಪ್ಲಾಸ್ಟಿಕ್ ಸ್ಟಾç, ಕಪ್ ಮತ್ತು ಕ್ಯಾರಿಬ್ಯಾಗ್ ಮೊದಲಾದವುಗಳು ನಿಷೇಧದ ಪಟ್ಟಿಯಲ್ಲಿವೆ. ಅದಾಗಿಯೂ ಪ್ಲಾಸ್ಟಿಕ್ ಬಳಸಿದವರಿಂದ ಅಧಿಕಾರಿಗಳು 11600 ರೂ ದಂಡ ವಸೂಲಿ ಮಾಡಿದ್ದಾರೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಬಿಕೆ ಸಂತೋಷ್, ದಾಂಡೇಲಿ ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಅಭಯಕುಮಾರ ದಾಳಿಯ ನೇತ್ರತ್ವವಹಿಸಿದ್ದರು.
Discussion about this post