ಯಲ್ಲಾಪುರ: ಮಂಚಿಕೇರೆಯಿoದ ಕುರಿಕೊಪ್ಪ ಕಡೆ ತೆರಳುತ್ತಿದ್ದ ಕುಮಾರ ನಾಯ್ಕ ಎಂಬಾತ ಎದುರಿನಿಂದ ಬಂದ ರಿಕ್ಷಾಗೆ ತನ್ನ ಬೈಕ್ ಗುದ್ದಿದ್ದು, ಇದರಿಂದ ಕುಮಾರ ನಾಯ್ಕ ಹಾಗೂ ಅವರ ಪತ್ನಿ ರಾಜೇಶ್ವರಿ ನಾಯ್ಕ’ಗೆ ಗಾಯವಾಗಿದೆ.
ಹಿತ್ಲಳ್ಳಿ ಬಳಿಯಿರುವ ವಾಟೆಹಳ್ಳಿಯ ಕುಮಾರ್ ನಾಯ್ಕ ಜುಲೈ 9ರಂದು ಸಂಜೆ ಬೈಕಿನಲ್ಲಿ ತನ್ನ ಪತ್ನಿ ಕೂರಿಸಿಕೊಂಡು ಹೊರಟಿದ್ದು, ಯಡಳ್ಳಿಯ 3ನೇ ಕ್ರಾಸ್ ಬಳಿ ಎದುರಿನಿಂದ ಬರುತ್ತಿದ್ದ ರಿಕ್ಷಾಗೆ ಬೈಕ್ ಗುದ್ದಿದೆ. ಈ ರಿಕ್ಷಾ ಶಿರನಾಳ ಕೆರೆ ಹೋಸಳ್ಳಿಯ ರಾಜು ನಾಯ್ಕ ಎಂಬಾತರಿಗೆ ಸೇರಿದ್ದು, ಬೈಕ್ ಗುದ್ದಿದ ರಭಸಕ್ಕೆ ರಿಕ್ಷಾಗೆ ಸಹ ಹಾನಿಯಾಗಿದೆ. ಹೀಗಾಗಿ ರಾಜು ಅವರು ಇದೀಗ ರಿಕ್ಷಾದ ಹಾನಿಯನ್ನು ಭರಿಸುವಂತೆ ಹೇಳಿದ್ದಾರೆ.




Discussion about this post