ಶಿರಸಿ: ತಾಲೂಕು ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಹೆಗಡೆ ಬುಧವಾರ ವಿವಿಧ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಆಹಾರ ಸೇವಿಸಿ ಗುಣಮಟ್ಟ ಪರಿಶೀಲಿಸಿದರು.
`ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮವಾದ ಆಹಾರ ನೀಡಬೇಕು. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಬೇಕು’ ಎಂದು ಅವರು ಶಿಕ್ಷಕರಿಗೆ ಸೂಚಿಸಿದರು. ಶಿರಸಿ ತಾಲೂಕಿನ ವಾನಳ್ಳಿ, ಸಾಲ್ಕಣಿ, ಮೇಲಿನ ಓಣಿಕೆರಿ, ಹಾಗೂ ಹುಣಸೆಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಶಾಲೆಯಲ್ಲಿ ನೀಡುವ ಆಹಾರದ ಗುಣಮಟ್ಟ, ಆಹಾರದ ಪ್ರಮಾಣ, ದಾಖಲೆಗಳ ನಿರ್ವಹಣೆ ಹಾಗೂ ಶಾಲಾ ಕೊಠಡಿ, ಗ್ರಂಥಾಲಯ ಇತರೆ ವಿಷಯಗಳ ಕುರಿತು ವಿಚಾರಿಸಿದರು.
`ಶಾಲೆಯಲ್ಲಿನ ಅಡುಗೆಕೋಣೆ ಸ್ವಚ್ಛವಾಗಿರಬೇಕು. ಅಲ್ಲದೇ ಮಕ್ಕಳಿಗೆ ನೀಡಲಾಗುವ ಪೌಷ್ಟಿಕ ಆಹಾರ ಸರಿಯಾಗಿ ವಿತರಣೆಯಾಗಬೇಕು, ಆಹಾರ ಶೇಖರಣಾ ಕೊಠಡಿಯು ಶುದ್ಧವಾಗಿದ್ದು, ಭದ್ರವಾಗಿರಬೇಕು. ಅವಧಿ ಮೀರಿದ, ಹಾಗೂ ಶುದ್ಧವಿಲ್ಲದ ಅಕ್ಕಿ, ಬೇಳೆಕಾಳುಗಳ ಬಳಕೆ ಮಾಡಬಾರದು’ ಎಂದು ಸೂಚಿಸಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರವಿ ಬೆಂಚುಳ್ಳಿ ಜೊತೆಗಿದ್ದರು.




Discussion about this post