ಉತ್ತರ ಕನ್ನಡ ಜಿಲ್ಲೆಗೆ ಮಂಜೂರಾಗಿದ್ದ ಕೆಲ BSNL ಟವರ್ ನಿರ್ಮಾಣಕ್ಕೆ ಇದ್ದ ಕೆಲ ತಾಂತ್ರಿಕ ಅಡಚಣೆಗಳು ಇದೀಗ ದೂರವಾಗಿದೆ.
ಟವರ್ ನಿರ್ಮಾಣಕ್ಕೆ ಕೆಲವಡೆ ಅರಣ್ಯ ಇಲಾಖೆ ಅನುಮತಿ ಸಿಕ್ಕಿರಲಿಲ್ಲ. ಅಲ್ಲಲ್ಲಿ ಸ್ಥಳಾವಕಾಶ ಸರಿಯಾಗಿರಲಿಲ್ಲ. ಇನ್ನೂ ಕೆಲವು ಕಡೆ ಟವರ್ ಮಂಜೂರಿ ಆಗಿದ್ದರೂ ಅಧಿಕಾರಿಗಳು ಕೆಲಸ ಮಾಡಲು ಸಿದ್ಧವಿರಲಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿದ ಸಂಸದ ವಿಶ್ವೇಶ್ವೇರ ಹೆಗಡೆ ಕಾಗೇರಿ ಕೆಲ ಅಡಚಣೆಗಳನ್ನು ದೂರ ಮಾಡಿದ್ದಾರೆ. ಈ ರೀತಿ 78 ಟವರ್ ನಿರ್ಮಾಣಕ್ಕೆ ಇದ್ದ ಸಮಸ್ಯೆಗಳನ್ನು ಅವರು ದೂರ ಮಾಡಿದ್ದಾರೆ. ಇದಕ್ಕೆ ಅರಣ್ಯ ಇಲಾಖೆ ಅನುಮತಿ ದೊರೆತಿದ್ದು, ಬಿ ಎಸ್ ಎನ್ ಎಲ್ ಅಧಿಕಾರಿಗಳನ್ನು ಸಂಪರ್ಕಿಸಿದ ಕಾಗೇರಿ, ತಕ್ಷಣ ಕೆಲಸ ಶುರು ಮಾಡಲು ಸೂಚಿಸಿದ್ದಾರೆ.
`ಉತ್ತರ ಕನ್ನಡ ಜಿಲ್ಲೆಯಲ್ಲಿ ದೂರ ಸಂಪರ್ಕ ಜಾಲವನ್ನು ವಿಸ್ತರಿಸಲು ಮತ್ತು ಗುಣಮಟ್ಟದ ಸೇವೆ ಒದಗಿಸಲು ಇನ್ನಷ್ಟು ಪ್ರಯತ್ನ ನಡೆಸುವೆ’ ಎಂದವರು ಹೇಳಿದ್ದಾರೆ. ಇನ್ನುಳಿದ ಟವರ್ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಅವರು ನೀಡಿದ್ದಾರೆ.
Discussion about this post