ಉತ್ತರ ಕನ್ನಡ ಜಿಲ್ಲೆಯಲ್ಲಿನ ಅಂಗನವಾಡಿಗಳ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಿರುವ ಕಾರವಾರದ ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ ಆ ಕುರಿತಾದ ವರದಿಯನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಸಲ್ಲಿಸುವ ಸಿದ್ಧತೆ ನಡೆಸಿದ್ದಾರೆ.
ಜಿಲ್ಲೆಯಲ್ಲಿ 325 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿವೆ. ಈ ಅಂಗನವಾಡಿಗಳಲ್ಲಿ ಆಹಾರ ಧಾನ್ಯಗಳ ಶೇಖರಣೆಗೆ ಸೂಕ್ತ ವ್ಯವಸ್ಥೆ ಇಲ್ಲ. ಮಕ್ಕಳಿಗೆ ಶುದ್ದೀಕರಿಸಿದ ನೀರಿನ ಕೊರತೆ ಇದ್ದು, ಪಾತ್ರೆಯಲ್ಲಿ ಬಿಸಿ ಮಾಡಿದ ನೀರು ನೀಡುವುದು ಅನಿವಾರ್ಯವಾಗಿದೆ. ಶೌಚಾಲಯ ಮತ್ತು ಅಡುಗೆ ಕೋಣೆ ಒಂದೇ ಕಡೆ ಇರುವುದು, ಶುಚಿತ್ವ ಇಲ್ಲದೇ ಇರುವುದು ದೊಡ್ಡ ಸಮಸ್ಯೆಯಾಗಿದೆ. ಕಾರವಾರ ನಗರದಲ್ಲಿನ ಒಂದು ಅಂಗನವಾಡಿ ಚರಂಡಿಯ ಮೇಲ್ಬಾಗದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದೆ. ಈ ಎಲ್ಲಾ ನ್ಯೂನ್ಯತೆಗಳ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಿದ ನ್ಯಾಯಾಧೀಶರು ಈ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಯ ಗಮನ ಸೆಳೆದಿದ್ದಾರೆ.
`ಜಿಲ್ಲೆಯಲ್ಲಿ ಒಟ್ಟು 2782 ಅಂಗನವಾಡಿಗಳಿದ್ದು, ಅವುಗಳಲ್ಲಿ 2112 ಸ್ವಂತ ಕಟ್ಟಡದಲ್ಲಿ, 41 ಪಂಚಾಯತ್ ಕಟ್ಟಡಗಳಲ್ಲಿ, 114 ಸಮುದಾಯ ಕಟ್ಟಡಗಳಲ್ಲಿ, 6 ಯುವಕ ಮಂಡಳಿಗಳಲ್ಲಿ, 1 ಮಹಿಳಾ ಮಂಡಳದಲ್ಲಿ, 171 ಶಾಲೆಗಳಲ್ಲಿ, 325 ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.




Discussion about this post