ಶಿರಸಿಯ ಸೋಂದಾ ಕಡೆಗುಂಟದಲ್ಲಿ 800 ವರ್ಷದ ಶಾಸನವೊಂದು ಪತ್ತೆಯಾಗಿದೆ.
ಇಲ್ಲಿನ ಶಶಾಂಕ ಮರಾಠೆ ಅವರು ನೀಡಿದ ಮಾಹಿತಿ ಮೇರೆಗೆ ಐತಿಹಾಸಿಕ ತಜ್ಞ ಲಕ್ಷ್ಮೀಶ ಹೆಗಡೆ ಸೋಂದಾ ಶಾಸನದ ಅಧ್ಯಯನ ನಡೆಸಿದ್ದಾರೆ. ಮೈಸೂರಿನ ಪ್ರೋ ನಾಗರಾಜ್ ಅವರು ಅವರು ಶಾಸನದ ಕುರಿತು ಚರ್ಚಿಸಿದ್ದಾರೆ. ಈ ವೀರಗಲ್ಲು ಹಳೆಗನ್ನಡದಲ್ಲಿದ್ದು, ಯುದ್ಧದಲ್ಲಿ ಮಡಿದ ವೀರಯೋಧನ ಬಗ್ಗೆ ಉಲ್ಲೇಖಿಸಲಾಗಿದೆ.
ಕಾರವಾರ ಹಾಗೂ ಮಣಲಿಯಲ್ಲಿನ ವೀರಯೋಧರಾದ ಕಲಾ ಗೌಡ ಹಾಗೂ ಬೊಮ್ಮು ಗೌಡರ ಬಗ್ಗೆ ಇದರಲ್ಲಿ ಬರೆಯಲಾಗಿದೆ. ಸೋದೆ ಅರಸರ ಕಾಲದ ಶಾಸನ ಇದಾಗಿದ್ದು, 12 ನೇ ಶತಮಾನದಲ್ಲಿ `ಕಡೆಗುಂಟ’ ಎಂಬ ಊರಿನ ಹೆಸರು ಹಾಗೇ ಇರುವ ಬಗ್ಗೆ ಈ ಶಾಸನ ಸಾಕ್ಷಿ ಒದಗಿಸಿದೆ.
Discussion about this post