6 Skip to content

ಶಾಲೆಯಿಂದ ಮನೆಗೆ ಮರಳಿದ ಮೆಕ್ಯಾನಿಕ್ ಸಾವು

ಭಟ್ಕಳ: ಕೆ ಎಸ್ ಆರ್ ಟಿ ಸಿ ಘಟಕದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ವಿಜಯಪುರ ಮೂಲದ ಹನುಮಂತರಾಯ ಕುಂಬಾರ (36) ಎಂಬಾತ ಏಕಾಏಕಿ ವಾಂತಿ ಮಾಡಿಕೊಂಡು ಸಾವನಪ್ಪಿದ್ದಾನೆ.
ಮುದ್ದೆಬಿಹಾಳದವನಾಗಿದ್ದ ಈತ ಕುಮಟಾದ ಹೆಗಡೆ ಕ್ರಾಸಿನಲ್ಲಿ ವಾಸವಾಗಿದ್ದ. ಜುಲೈ 11ರಂದು ಮಗನನ್ನು ಶಾಲೆಗೆ ಬಿಟ್ಟ ನಂತರ ಮನೆಗೆ ಬಂದು ವಿಹರಿಸಿದ್ದ. ಆಗ ಏಕಾಏಕಿ ವಾಂತಿ ಮಾಡಿಕೊಂಡಿದ್ದು ಮೂರ್ಚೆ ಹೋದ ಆತನನ್ನು ಸಹೋದರ ಈರಣ್ಣ ಕಂಬಾರ್ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ, ಪರೀಕ್ಷಿಸಿದ ವೈದ್ಯರು ಆತ ಸಾವನಪ್ಪಿದ ಬಗ್ಗೆ ಘೋಷಿಸಿದರು. ಹೃದಯಘಾತ ಅಥವಾ ಇನ್ಯಾವುದೋ ರೋಗದಿಂದ ಆತ ಸಾವನಪ್ಪಿರುವ ಶಂಕೆ ವ್ಯಕ್ತವಾಗಿದೆ.

Leave a comment

Leave a Reply

You cannot copy content of this page