ಹಳಿಯಾಳ: ಸಕ್ಕರೆ ಕಾರ್ಖಾನೆ ಬಳಿಯ ಉಪ್ಪಿನ ಲೇಔಟ್’ನಲ್ಲಿ ಜೂಜಾಡುತ್ತಿದ್ದವರ ಮೇಲೆ ಪಿಸೈ ವಿನೋದ ಎಸ್ ಕೆ ದಾಳಿ ನಡೆಸಿದ್ದು, ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಜುಲೈ 11ರಂದು ಸಂಜೆ ತೆರಗಾವಿನ ಪಿರಾಜಿ ನಾರಾಯಣ ಮಾನೆ, ಆನೆಗುಂದಿಯ ಆಕಾಶ ಪ್ರಭಾಕರ ಗಜಾಕೋಶ, ಖಾನಾಪುರದ ತಾನೂಜಿ ನಾಗೇಂದ್ರ ಹರಿಜನ ಹಾಗೂ ಸಿದ್ದರಾಮೇಶ್ವರ ಗಲ್ಲಿಯ ಹನುಮಂತ ಯಲ್ಲಪ್ಪಾ ವಡ್ಡರ್ ಎಂಬಾತರು ಇಸ್ಪಿಟ್ ಎಲೆಗಳ ಮೇಲೆ ಹಣಕಟ್ಟಿ ಅಂದರ್ – ಬಾಹರ್ ಆಡುತ್ತಿದ್ದರು. ಆಗ ದಾಳಿ ನಡೆಸಿದ ಪೊಲೀಸರು ಇಸ್ಪಿಟ್ ಎಲೆಗಳ ಜೊತೆ 1200ರೂ ಹಣ ಹಾಗೂ ಇನ್ನಿತರ ಪರಿಕ್ಕರಗಳನ್ನು ವಶಕ್ಕೆ ಪಡೆದಿದ್ದಾರೆ.
ಓಸಿ ಬುಕ್ಕಿ ಮೇಲೆಯೂ ದಾಳಿ:
ಜೂಜಾಟ ನಡೆಸುತ್ತಿದ್ದವರನ್ನು ಪೊಲೀಸ್ ಠಾಣೆಗೆ ಕರೆದೊಯ್ದ ನಂತರ ಇನ್ನೊಂದು ಕಾರ್ಯಾಚರಣೆ ನಡೆಸಿದ ಪಿಸೈ ವಿನೋದ ಎಸ್ ಕೆ ಬಸ್ ನಿಲ್ದಾಣದ ಬಳಿ ಓಸಿ ಆಡಿಸುತ್ತಿದ್ದ ಅಜಯ್ ದಿಲ್ ಬಹುದ್ದೂರ್ ಎಂಬಾತನನ್ನು ಬಂಧಿಸಿದ್ದಾರೆ.
ಜುಲೈ 11ರ ರಾತ್ರಿ 8 ಗಂಟೆ ವೇಳೆಗೆ ಅಜಯ್ 1 ರೂಪಾಯಿಗೆ 80 ರೂ ನೀಡುವುದಾಗಿ ನಂಬಿಸಿ ಈತ ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದ. ಆತನ ಮೇಲೆ ದಾಳಿ ನಡೆಸಿದ ಪೊಲೀಸರಿಗೆ 670ರೂ ನಗದು ಹಾಗೂ ಇನ್ನಿತರ ಪರಿಕ್ಕರಗಳು ಸಿಕ್ಕಿವೆ.
Discussion about this post