ಕೃಷ್ಣನ ಬಲಿ ಪಡೆದ ಶರಾವತಿ | ಬದುಕಿಗೆ ಆಸರೆಯಾಗಿದ್ದ ಬಲೆ ಜೀವಕ್ಕೆ ಮಾರಕ | ಶರಾವತಿ ನದಿಯಲ್ಲಿ ತೇಲಿದ ಬಡವನ ಶವ
ಹೊನ್ನಾವರ: ಶರಾವತಿ ನದಿಗೆ ಮೀನು ಹಿಡಿಯಲು ಹೋಗಿದ್ದ ಉದ್ಯಮನಗರದ ಕೃಷ್ಣಾ ಮೇಸ್ತ (50) ಮೀನು ಹಿಡಿಯಲು ಬಳಸುವ ಬಲೆಗೆ ಸಿಲುಕಿ ಸಾವನಪ್ಪಿದ್ದಾನೆ.
ಕೃಷ್ಣ ಮೇಸ್ತನ ಪತ್ನಿ ಹಾಗೂ ಮಗಳು ಉಡುಪಿಯಲ್ಲಿ ವಾಸವಾಗಿದ್ದು, ಈತ ಉದ್ಯಮನಗರದ ತನ್ನ ಬಾವ ಉಮೇಶ ತಾಂಡೇಲ’ರ ಮನೆಯಲ್ಲಿ ಇರುತ್ತಿದ್ದ. ನಿತ್ಯ ಬೆಳಗ್ಗೆ ಪಾತಿದೋಣಿ ಮೂಲಕ ಮೀನು ಹಿಡಿಯಲು ಹೋಗುತ್ತಿದ್ದ. ಜುಲೈ 11ರಂದು ಮಳೆ ಇದ್ದ ಕಾರಣ ಶರಾವತಿ ನದಿಗೆ ನಡೆದು ಹೋಗಿದ್ದ. ನದಿಯಲ್ಲಿ ಬಲೆ ಬೀಸಿ ಮುಂದೆ ಸಾಗುತ್ತಿದ್ದ
ಮಧ್ಯಾಹ್ನದ ವೇಳೆಗೆ ಆತ ಬೀಸಿದ ಬಲೆ ಆತನ ಕಾಲಿಗೆ ಸುತ್ತಿಕೊಂಡಿದ್ದು, ಅದರಿಂದ ತಪ್ಪಿಸಿಕೊಳ್ಳಲಾಗದೇ ಕೃಷ್ಣ ಮೇಸ್ತ ಸಾವನಪ್ಪಿದ್ದಾನೆ. ಬಲೆಯಿಂದ ತಪ್ಪಿಸಿಕೊಳ್ಳುವ ಬರದಲ್ಲಿ ಆತ ನೀರಿನಲ್ಲಿ ಮುಳುಗಿದ್ದು, ಶವ ತೇಲುತ್ತಿರುವುದನ್ನು ನೋಡಿದ ರಾಮಾ ಮೇಸ್ತಾ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.
Discussion about this post