ಬೆಂಗಳೂರು: ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿ ಮೇಲೆ ದಾಳಿ ನಡೆಸುವುದಾಗಿ ವ್ಯಕ್ತಿಯೊಬ್ಬ ಫೋನ್ ಮಾಡಿದ್ದು, ತನ್ನನ್ನು ತಾನು ಲೋಕಾಯುಕ್ತ ಎಂದು ಆತ ಪರಿಚಯಿಸಿಕೊಂಡಿದ್ದಾನೆ.
ವಿವಿ ಟವರ್‌ನ ೯ನೇ ಮಹಡಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿ ಮೇಲೆ ದಾಳಿ ನಡೆಸುವುದಾಗಿ ಆತ ಬೆದರಿಕೆ ಒಡ್ಡಿದ್ದಾನೆ. ಕಾರ್ಪೊರೇಷನ್ ಜನರಲ್ ಮ್ಯಾನೇಜರ್ ಕವಿತಾ ಅವರಿಗೆ ಕರೆ ಮಾಡಿರುವ ಆರೋಪಿ ತನ್ನನ್ನು ಲೋಕಾಯುಕ್ತ ಡಿವೈಎಸ್ಪಿ ಪ್ರಕಾಶ್ ಎಂದು ಗುರುತಿಸಿಕೊಂಡಿದ್ದು, ಲೋಕಾಯುಕ್ತ ದಾಳಿ ನಡೆಯಲಿದ್ದು, ಜುಲೈ ೩ ಮತ್ತು ೪ ರಂದು ಕಚೇರಿಗೆ ಹಾಜರಾಗದಂತೆ ಎಚ್ಚರಿಕೆ ನೀಡಿದ್ದಾನೆ. ಇದರ ಬೆನ್ನಲ್ಲೇ ಕವಿತಾ ಅವರು ಲೋಕಾಯುಕ್ತ ಕಚೇರಿಗೆ ಕರೆ ಮಾಡಿ ಪ್ರಕಾಶ್ ಎಂಬ ವ್ಯಕ್ತಿ ಇದ್ದಾರೆಯೇ ಎಂದು ಪರಿಶೀಲಿಸಿದ್ದಾರೆ. ಇಲ್ಲ ಎಂಬ ಉತ್ತರ ಬಂದ ಬಳಿಕ ಕವಿತಾ ಅವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Discussion about this post