6 Skip to content

ಮಹಿಳೆಯನ್ನು ನುಂಗಿದ ಹೆಬ್ಬಾವು!

ಮಧ್ಯ ಇಂಡೋನೇಷ್ಯಾ ಮಕಾಸ್ಸರ್’ನಲ್ಲಿ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಫರೀದಾ (೪೫) ಎಂಬಾಕೆ ಹೆಬ್ಬಾವಿನ ಹೊಟ್ಟೆಯೊಳಗೆ ಪತ್ತೆಯಾಗಿದ್ದು, ಆಕೆಯ ಶವವನ್ನು ಹೊರತೆಗೆಯಲಾಗಿದೆ.
ಹೆಬ್ಬಾವು ೧೬ ಅಡಿ ಉದ್ದವಿತ್ತು. ನಾಲ್ಕು ಮಕ್ಕಳ ತಾಯಿ ೪೫ ವರ್ಷದ ಫರೀದಾ ಗುರುವಾರ ರಾತ್ರಿ ನಾಪತ್ತೆಯಾಗಿದ್ದರು. ಈ ವೇಳೆ ಫರೀದಾ ಅವರ ಪತಿ ಗ್ರಾಮದಲ್ಲಿ ವ್ಯಾಪಕ ಶೋಧ ನಡೆಸಿದ್ದರು. ಆದರೆ ಫರೀದಾ ಪತ್ತೆಯಾಗಿರಲಿಲ್ಲ. ಬಳಿಕ ಗ್ರಾಮದ ಕಾಲುವೆಯಲ್ಲಿ ಹೆಬ್ಬಾವು ಭಾರಿ ಗಾತ್ರದ ಹೊಟ್ಟೆಯೊಂದಿಗೆ ಪತ್ತೆಯಾಗಿತ್ತು. ಕೂಡಲೇ ತಜ್ಞರೊಂದಿಗೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಹಾವಿನ ಹೊಟ್ಟೆಯನ್ನು ಬಗೆದಾಗ ಮಹಿಳೆಯ ಶವ ದೊರೆಯಿತು.

Leave a comment

Leave a Reply

You cannot copy content of this page