ಯಲ್ಲಾಪುರ: ಶಾಲಾ ಆವರಣದ 100ಮೀ ಅಂತರದಲ್ಲಿ ಬೀಡಿಯನ್ನು ಸಹ ಬಳಸುವ ಹಾಗಿಲ್ಲ. ಅಂಥಹುದರಲ್ಲಿ ಮಚ್ಚಿಗಲ್ಲಿ ಕೆಜಿಎಸ್ ಶಾಲೆ ಹಿಂದೆ ರಾಜಾರೋಷವಾಗಿ ಗಾಂಜಾ ಸೇದುತ್ತಿದ್ದ ಕಾರ್ತಿಕ್ ಸಿದ್ದಿ (20 ವರ್ಷ) ಎಂಬಾತನನ್ನು ವಶಕ್ಕೆ ಪಡೆದ ಪಿಸೈ ನಿರಂಜನ ಹೆಗಡೆ ಆತನ ನಶೆ ಇಳಿಸಿದ್ದಾರೆ.
ತಳ್ಳಿಗೇರಿ ಗ್ಯಾಸ್ ಗೌಡನ್ ಹಿಂದೆ ವಾಸವಾಗಿರುವ ಕಾರ್ತಿಕ ಚಂದ್ರು ಸಿದ್ದಿ ಗಾಂಜಾ ವ್ಯಸನಿಯಾಗಿದ್ದು, ಜುಲೈ 12ರ ಬೆಳಗ್ಗೆ 11.30ಕ್ಕೆ ಶಾಲೆ ಹಿಂದೆ ಗಾಂಜಾ ಸೇದುತ್ತಿದ್ದ. ಅಮಲಿನಲ್ಲಿರುವಾಗಲೇ ಪೊಲೀಸರು ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದರು. ನಂತರ ಕಾರ್ತಿಕನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಅಲ್ಲಿ ಆತ ಗಾಂಜಾ ಸೇವಿಸಿರುವುದು ದೃಢವಾಗಿದೆ. ಇನ್ನೂ ಸರಿಯಾಗಿ ಮೀಸೆ ಚಿಗುರದ ಯುವಕನಿಗೆ ಗಾಂಜಾ ಸರಬರಾಜು ಮಾಡಿದವರು ಯಾರು? ಎಂಬುದರ ಬಗ್ಗೆ ಸಹ ತನಿಖೆ ನಡೆಯುತ್ತಿದೆ.




Discussion about this post