ಅಂಕೋಲಾ: ಮಂಗಳೂರಿನ ಕೆ ಎಸ್ ಹೆಗಡೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಒಳಗಾಗಿದ್ದ ಹಿಲ್ಲೂರಿನ ಉಷಾ ಪಟಗಾರ (40) ಸಾವನಪ್ಪಿದ್ದಾರೆ.
ಹಿಲ್ಲೂರಿನ ತಿಂಗಳಬೈಲಿನ ಉಷಾ ಪಟಗಾರ ಭೂಮಿಯನ್ನು ಗೇಣಿ ಪಡೆದು ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಗೇಣಿ ಪಡೆದ ಜಮೀನಿನಲ್ಲಿ ಭತ್ತ ಬೆಳೆಯುವ ಉದ್ದೇಶದಿಂದ ಜೂ 26ರಂದು ಗೊಬ್ಬರ ಹಾಕಲು ಹೋಗಿದ್ದರು. ದಿಬ್ಬದ ಮೇಲೆ ನಡೆದು ಹೋಗುತ್ತಿರುವಾಗ ಕಾಲು ಜಾರಿ ಕೆಳಗೆ ಬಿದ್ದಿದ್ದು, ಆ ವೇಳೆ ಗುತ್ತಿಗೆಯ ಒಳಭಾಗಕ್ಕೆ ನೋವಾಗಿತ್ತು. ಈ ಬಗ್ಗೆ ಮಂಗಳೂರಿನ ಆಸ್ಪತ್ರೆಗೆ ತೋರಿಸಿದ್ದು, ಅವರ ಸೂಚನೆ ಪ್ರಕಾರ ಶಸ್ತ್ರಚಿಕಿತ್ಸೆ ಒಳಗಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನಪ್ಪಿದ್ದಾರೆ.
Discussion about this post