6 Skip to content

ಮುಂದೆ ಗುದ್ದಿ ಹಿಂದಿನಿoದ ಹೊಡೆಸಿಕೊಂಡ ಟವೆರಾ

ಕಾರವಾರ: ಲಂಡನ್ ಸೇತುವೆಯ ಬಳಿ ಮೂರು ಕಾರುಗಳ ನಡುವೆ ಸರಣಿ ಅಪಘಾತ ನಡೆದಿದೆ. ಪರಿಣಾಮ ಮೂರು ವಾಹನಗಳು ಜಖಂ ಆಗಿದೆ.
ಬಿಣಗಾ ಕಡೆಯಿಂದ ಬರುವಾಗ ಲಂಡನ್ ಸೇತುವೆಯ ಬಳಿ ಗೋವಾ ನೊಂದಣಿಯ ಕಾರಿನ ಚಾಲಕ ಏಕಾಏಕಿ ಬ್ರೆಕ್ ಹಾಕಿದ್ದು, ಅದರ ಹಿಂಬದಿ ಇದ್ದ ಟವೇರಾ ಕಾರಿನ ಚಾಲಕ ಸಹ ವಾಹನ ನಿಲ್ಲಿಸಿದ್ದಾನೆ. ಆದರೆ, ಹಿಂದಿನಿoದ ಬಂದ ತೆಲಂಗಾಣ ನೊಂದಣಿಯ ಮಹೇಂದ್ರಾ ಕಾರು ಚಾಲಕನ ನಿಯಂತ್ರಣಕ್ಕೆ ಸಿಗದೇ ಟವೇರಾ ಕಾರಿಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ತವೇರಾ ಕಾರು ಮುಂದಿನ ಕಾರಿಗೆ ಬಡಿದು ಮೂರು ಕಾರುಗಳು ಜಖಂ ಆಗಿವೆ.

Leave a comment

Leave a Reply

You cannot copy content of this page