6 Skip to content

ಬೈಕ್ ಅಪಘಾತ: ಮೂವರಿಗೆ ಗಾಯ

ಹೊನ್ನಾವರ: ಸೆಂಟ್ರಿoಗ್ ಕೆಲಸ ಮಾಡುವ ಕರ್ಕಿಯ ವಿಷ್ಣು ಆಚಾರಿ ಎಂಬಾತ ದುಗ್ಗರ ತಿರುವಿನಲ್ಲಿ ಏಕಾಏಕಿ ತನ್ನ ಬೈಕ್’ನ್ನು ಬಲಕ್ಕೆ ತಿರುಗಿಸಿದ ಪರಿಣಾಮ ಇನ್ನೊಂದು ಬೈಕ್ ಬಂದು ಗುದ್ದಿದ್ದು, ಆ ಬೈಕಿನಲ್ಲಿದ್ದ ಸಂತೆಗುಳಿಯ ಪ್ರಿನ್ಸಿಲ್ ಹೋರ್ಟ (19), ಹೊಸಾಡದ ಪ್ರಿಯಾ ಲೂಪಿಸ್ (23) ಎಂಬಾತರ ಮುಖ ಹಾಗೂ ತಲೆಗೆ ಪೆಟ್ಟಾಗಿದೆ.
ಜುಲೈ 12ರ ರಾತ್ರಿ ವಿಷ್ಣು ಆಚಾರಿ ಹೊನ್ನಾವರ ಕಡೆಯಿಂದ ಹೊರಟಿದ್ದ. ದುಗ್ಗರ ತಿರುವಿನಲ್ಲಿ ಯಾವುದೇ ಮುನ್ಸೂಚನೆ ನೀಡದೇ ಬೈಕನ್ನು ತಿರುಗಿಸಿದ್ದ. ಆಗ ಕುಮಟಾದಿಂದ ಹೊನ್ನಾವರಕ್ಕೆ ಬರುತ್ತಿದ್ದ ಸಂತೆಗುಳಿಯ ಪ್ರಿನ್ಸಿಲ್ ಹೋರ್ಟ ಬೈಕ್ ವಿಷ್ಣು ಆಚಾರಿಯ ಬೈಕಿಗೆ ಗುದ್ದಿದ್ದು, ಇದರಿಂದ ಪ್ರಿನ್ಸಿಲ್ ಹೋರ್ಟ, ಪ್ರಿಯಾ ಲೂಪಿಸ್’ಗೆ ಗಾಯವಾಗಿದೆ. ವಿಷ್ಣು ಆಚಾರಿ ಸಹ ಬೈಕಿನಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದಾನೆ.

Leave a comment

Leave a Reply

You cannot copy content of this page