ಕುಮಟಾ: ಶಾಸಕ ದಿನಕರ ಶೆಟ್ಟಿ ಶನಿವಾರ ರೈಲ್ವೆ ಅಧಿಕಾರಿಗಳ ಜೊತೆ ರೈಲು ನಿಲ್ದಾಣ ಸುತ್ತಾಟ ನಡೆಸಿದರು.
ಕುಮಟಾದಲ್ಲಿ ಅತ್ಯುತ್ತಮ ದರ್ಜೆಯ ಎರಡನೇ ಫ್ಲಾಟ್ ಫಾರಂ ನಿರ್ಮಾಣ ಮಾಡುವ ಬಗ್ಗೆ ಅಧಿಕಾರಿಗಳ ಜೊತೆ ಅವರು ಚರ್ಚಿಸಿದರು. ಸ್ಥಳೀಯ ರೈಲು ನಿಲ್ದಾಣದಲ್ಲಿ ವಂದೇ ಭಾರತ ರೈಲು ನಿಲುಗಡೆಗೆ ಅವಕಾಶ ಕಲ್ಪಿಸುವ ಬಗ್ಗೆ ಮಾತನಾಡಿದರು. ಪಂಚಗoಗಾ ಎಕ್ಸ್ಪ್ರೆಸ್ ರೈಲು ತಡವಾಗಿ ಬರುತ್ತಿದ್ದು, ಇದರಿಂದ ಪ್ರಯಾಣಿಕರಿಗೆ ಆಗುವ ಸಮಸ್ಯೆಗಳ ಬಗ್ಗೆ ಗಮನಸೆಳೆದರು. ಇದರ ಜೊತೆ ಪೆರ್ನಿಂ – ಕಾರವಾರ ರೈಲನ್ನು ಕುಮಟಾದವರೆಗೂ ವಿಸ್ತರಿಸಬೇಕು ಎಂದು ಆಗ್ರಹಿಸಿದರು. ಪ್ರಮುಖರಾದ ರಾಜೀವ ಗಾಂವ್ಕರ್ ಜೊತೆಗಿದ್ದರು.
ರೈಲು ನಿಲ್ದಾಣದಲ್ಲಿ ಶಾಸಕರ ಸಂಚಾರ

Leave a comment