ಜುಲೈ 18ರವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಗಳಿದೆ. ಹೀಗಾಗಿ ಈ ಅವಧಿಯನ್ನು `ರೆಡ್ ಅಲರ್ಟ’ ಎಂದು ಘೋಷಿಸಲಾಗಿದೆ.
ತುರ್ತು ನೆರವಿಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ 24 ತಾಸು ಕೆಲಸ ನಿರ್ವಹಿಸುವ ಕೇಂದ್ರ ತೆರೆಯಲಾಗಿದೆ. ಪೊಲೀಸ್, ಅಗ್ನಿಶಾಮಕ, ಹೆಸ್ಕಾಂ, ಅರಣ್ಯ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಇಲ್ಲಿ ಕೆಲಸ ನಿರ್ವಹಿಸುತ್ತಾರೆ. ಸಾರ್ವಜನಿಕರು ತಮಗಾಗುವ ತೊಂದರೆಯ ಬಗ್ಗೆ 1077 ಅಥವಾ 9483511015 ಕರೆ, ವಾಟ್ಸಾಪ್ ಮೂಲಕ ಮಾಹಿತಿ ನೀಡಿದಲ್ಲಿ ನೆರವು ನೀಡಲಾಗುತ್ತದೆ.
Discussion about this post