ಶಿರಸಿಯಿಂದ ಕುಮಟಾಗೆ ತೆರಳುವ ರಸ್ತೆಯಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿತವಾಗಿದೆ. ದೇವಿಮನೆ ಘಟ್ಟ ಪ್ರದೇಶದಲ್ಲಿ ಗುಡ್ಡ ಕುಸಿದು ಸಂಚಾರಕ್ಕೆ ತಡೆ ಉಂಟಾಗಿದೆ. ರಾಗಿ ಹೊಸಳ್ಳಿ ಬಳಿ ಸಹ ರಸ್ತೆ ಮೇಲೆ ಇನ್ನೊಂದು ಗುಡ್ಡ ಕುಸಿದಿದೆ. ಜುಲೈ 16ರ ನಸುಕಿನ 2 ಗಂಟೆ ವೇಳೆಗೆ ಗುಡ್ಡ ಜರಿದು ರಸ್ತೆ ಮೇಲೆ ಬಿದ್ದಿದೆ.
ಪ್ರಸ್ತುತ ಜೆಸಿಬಿ ಹಾಗೂ ಇನ್ನಿತರ ಯಂತ್ರಗಳು ಸ್ಥಳಕ್ಕೆ ತೆರಳಿದ್ದು, ಗುಡ್ಡ ತೆರವು ಮಾಡುವ ಕೆಲಸ ಶುರುವಾಗಿದೆ. ಪ್ರಸ್ತುತ ಈ ಮಾರ್ಗದಲ್ಲಿ ತೆರಳುತ್ತಿರುವವರು ದಿಕ್ಕು ಬದಲಿಸುವುದು ಒಳತು.
Discussion about this post