ಹೊನ್ನಾವರ: ಕರ್ಕಿಯ ಜ್ಞಾನೇಶ್ವರಿ ಮಠದಲ್ಲಿ ಮೂರು ವರ್ಷಗಳಿಂದ ಸಂಸ್ಕೃತ ಅಧ್ಯಯನ ನಡೆಸುತ್ತಿದ್ದ ರೋಹಿತ್ ಭಟ್ಟ ರಾಯ್ಕರ್ (17 ವರ್ಷ) ಎಂಬಾತರು ಅಲ್ಲಿನ ಪುಷ್ಕರಣಿಯಲ್ಲಿ ಬಿದ್ದು ಸಾವನಪ್ಪಿದ್ದಾರೆ.
ಮೂರು ವರ್ಷಗಳಿಂದ ಮಠದಲ್ಲಿಯೇ ವಾಸವಾಗಿದ್ದ ರಾಣೆಬೆನ್ನೂರಿನ ರೋಹಿತ್ ಜುಲೈ 15ರ ರಾತ್ರಿ 8 ಗಂಟೆ ವೇಳೆಗೆ ನಡೆದು ಹೋಗುತ್ತಿದ್ದರು. ಆಗ ಅವರ ಮೈಮೇಲೆ ಇದ್ದ ಶಾಲು ಗಾಳಿಗೆ ಹಾರಿಹೋಗಿದ್ದು, ಅದನ್ನು ಹಿಡಿಯುವ ಪ್ರಯತ್ನ ನಡೆಸಿದರು. ಆಗ ಕಾಲು ಜಾರಿ ನೀರಿನಲ್ಲಿ ಬಿದ್ದರು. ಈ ವಿಷಯ ಅರಿತ ಅಗ್ನಿಶಾಮಕ ಸಿಬ್ಬಂದಿ ಪುಷ್ಕರಣಿಯಲ್ಲಿ ಮುಳುಗಿದ್ದ ಅವರನ್ನು ಹುಡುಕಿ ಹೊರ ತೆಗೆದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, 8.40ರ ವೇಳೆಗೆ ರೋಹಿತ್ ಸಾವನಪ್ಪಿರುವ ಬಗ್ಗೆ ವೈದ್ಯರು ಘೋಷಿಸಿದರು. ಪುರೋಹಿತ ವೃತ್ತಿ ಮಾಡುವ ಅವರ ತಂದೆ ದತ್ತಾತ್ರೇಯ ಭಟ್ಟ ರಾಯ್ಕರ್ ಪುತ್ರನ ಶವದ ಎದುರು ಕಣ್ಣೀರಾದರು.




Discussion about this post