ಕರಾವಳಿಯಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಸಾವು-ನೋವುಗಳು ಸಂಭವಿಸುತ್ತಿದ್ದು, ಹೆದ್ದಾರಿ ಅಗಲೀಕರಣ ಗುತ್ತಿಗೆವಹಿಸಿಕೊಂಡ ಐ ಆರ್ ಬಿ ಕಂಪನಿ ವಿರುದ್ಧ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿದೆ.
ಕೇಂದ್ರ ಸಚಿವರೊಬ್ಬರ ಮಾಲಕತ್ವದಲ್ಲಿ ಐ ಆರ್ ಬಿ ಕಂಪನಿ ನಡೆಯುತ್ತಿದೆ. 10 ವರ್ಷ ಕಳೆದರೂ ಹೆದ್ದಾರಿ ಅಭಿವೃದ್ಧಿ ಕೆಲಸ ಮುಗಿದಿಲ್ಲ. ಸೇತುವೆಗಳ ನಿರ್ಮಾಣ, ರಸ್ತೆ ಅಗಲೀಕರಣ ಸಾಕಷ್ಟು ಕಡೆ ಬಾಕಿ ಉಳಿದಿದೆ. ಹೆದ್ದಾರಿ ಅಗಲೀಕರಣಕ್ಕೂ ಮುನ್ನ ಗುಡ್ಡಗಳ ಬಗ್ಗೆ ಸಮೀಕ್ಷೆ ನಡೆಸಿಲ್ಲ. ಅಪಘಾತ ವಲಯಗಳ ಬಗ್ಗೆ ಪಟ್ಟಿ ಸಿದ್ಧವಿದ್ದರೂ ಆ ಬಗ್ಗೆ ಗಮನಹರಿಸಿಲ್ಲ. ಕಾಮಗಾರಿ ಮುಗಿಯುವ ಮುನ್ನವೇ ವಾಹನಗಳಿಂದ ಟೋಲ್ ವಸೂಲಿ ಶುರುವಾಗಿರುವ ಬಗ್ಗೆ ಆಕ್ಷೇಪಗಳು ನಿರಂತರವಾಗಿದೆ. ಆದರೆ, ಈ ಬಗ್ಗೆ ಈವರೆಗೂ ಯಾವ ಜನಪ್ರತಿನಿಧಿಗಳು ಚಕಾರವೆತ್ತಿಲ್ಲ.
`ಹೆದ್ದಾರಿ ಅಂಚಿನಲ್ಲಿ ಮೊದಲಿನಿಂದಲೂ ಮನೆ ನಿರ್ಮಿಸಿಕೊಂಡವರು ನಿತ್ಯ ನರಕ ಅನುಭವಿಸುತ್ತಿದ್ದಾರೆ. ಆ ಕಡೆಯಿಂದ ಈ ಕಡೆ ರಸ್ತೆ ದಾಟಲು ಸಹ ಅಲ್ಲಿನವರು ಹೆದರುತ್ತಿದ್ದಾರೆ. ಕಾಮಗಾರಿ ವೈಪಲ್ಯದಿಂದಾಗಿ ಮನೆ ಒಳಗಡೆ ನೀರು ನುಗ್ಗಿದ್ದು, ಅಲ್ಲಿನವರ ಸಮಸ್ಯೆ ಅವರವರಿಗೆ ಮಾತ್ರ ಗೊತ್ತು. ಮಳೆ ಮುಗಿದ ಮೇಲಾದರೂ ಜಿಲ್ಲಾಡಳಿತ ಹೆದ್ದಾರಿ ಕಾಮಗಾರಿಯನ್ನು ವೈಜ್ಞಾನಿಕವಾಗಿ ಮುಗಿಸುವ ಬಗ್ಗೆ ಗುತ್ತಿಗೆ ಕಂಪನಿಗೆ ತಾಕೀತು ಮಾಡಬೇಕು’ ಎಂದು ಕಾರವಾರದ ರಾಜಾ ನಾಯ್ಕ ಕಡವಾಡ ಒತ್ತಾಯಿಸಿದ್ದಾರೆ.
Discussion about this post