6
September 28, 2026

ಆಶ್ರಮದಲ್ಲಿ ಬೆಳೆದ ಪ್ರೀತಿ: ಅನಾಥರನ್ನು ಒಂದು ಮಾಡುವ ಮಂತ್ರ ಮಾಂಗಲ್ಯ!

ಸಿದ್ದಾಪುರ: ಅನಾಥರು ಹಾಗೂ ನಿರ್ಗತಿಕರನ್ನು ಸಲಹುತ್ತಿರುವ ಮುಗದೂರಿನ ಪುನೀತ್ ರಾಜಕುಮಾರ ಆಶ್ರಯಧಾಮದಲ್ಲಿ ಜುಲೈ 18ರಂದು `ಮಂತ್ರ ಮಾಂಗಲ್ಯ’ ವಿವಾಹ ಮಹೋತ್ಸವ ನಡೆಯಲಿದೆ.
ಆಶ್ರಮದ ಮುಖ್ಯಸ್ಥ ನಾಗರಾಜ ನಾಯ್ಕ ಈ ಬಗ್ಗೆ ಮಾಹಿತಿ ನೀಡಿದ್ದು, `ಕಳೆದ 10 ವರ್ಷಗಳಿಂದ ಅನಾಥಾಶ್ರಮ ನಡೆಯುತ್ತಿದೆ. ಪ್ರಸ್ತುತ ಅನಾರೋಗ್ಯ ಪೀಡಿತರಾಗಿ ಆಶ್ರಮದಲ್ಲಿ ಆಶ್ರಯ ಪಡೆದಿದ್ದ ಹೊನ್ನವಾರದ ದಿವ್ಯಾ ಹಾಗೂ ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಈರಣ್ಣ ಗುಣಮುಖರಾಗಿದ್ದು, ಅವರಿಬ್ಬರು ಪ್ರೀತಿಯಲ್ಲಿದ್ದಾರೆ. ಹೀಗಾಗಿ ಕುವೆಂಪು ಆಶಯದಂತೆ ಮಂತ್ರ ಮಾಂಗಲ್ಯ ಏರ್ಪಡಿಸಲಾಗಿದೆ’ ಎಂದರು.

Leave a Reply

Your email address will not be published. Required fields are marked *

You cannot copy content of this page