6
September 28, 2026

ರೆಡ್ ಅಲರ್ಟ: ಡಿಪ್ಲೋಮಾ ಕಾಲೇಜಿಗೂ ‘ಮಳೆ ರಜೆ’

ರೆಡ್ ಅಲರ್ಟ ಹಿನ್ನಲೆ ಶಾಲಾ‌ ಕಾಲೇಜುಗಳಿಗೆ ಜುಲೈ 18ರಂದು‌ ರಜೆ ಘೋಷಿಸಿದ್ದ ಜಿಲ್ಲಾಡಳಿತ ಈ ರಜೆಯನ್ನು ಡಿಪ್ಲೋಮಾ ಕಾಲೇಜುಗಳಿಗೂ ವಿಸ್ತರಿಸಿದೆ.

ಕಳೆದ‌ ಒಂದು ವಾರದಿಂದ‌ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಈ ಹಿನ್ನಲೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಧಿಕಾರಿ‌ ಲಕ್ಷ್ಮೀಪ್ರಿಯಾ ಆಯಾ‌ ದಿನದ‌ ಪರಿಸ್ಥಿತಿಗೆ ಅನುಗುಣವಾಗಿ ರಜೆ ಘೋಷಿಸುತ್ತಿದ್ದು, ಬುಧವಾರ ಸಂಜೆ ಜಿಲ್ಲೆಯ 10 ತಾಲೂಕಿನ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯು ಕಾಲೇಜಿಗೆ ರಜೆ ಘೋಷಿಸಿದ್ದರು. ಇದೀಗ ಡಿಪ್ಲೋಮಾ ಕಾಲೇಜಿಗೆ ಸಹ ರಜೆ ವಿಸ್ತರಿಸಿದ್ದಾರೆ.
ಮುಂಡಗೋಡು ಹಾಗೂ ಹಳಿಯಾಳ ತಾಲೂಕಿಗೆ ಈ ರಜೆ ಅನ್ವಯವಾಗುತ್ತಿಲ್ಲ.

Leave a Reply

Your email address will not be published. Required fields are marked *

You cannot copy content of this page