ಹೆದ್ದಾರಿ ಮೇಲೆ ಇನ್ನೊಂದು ಗುಡ್ಡ ಕುಸಿತ!
ಕುಮಟಾ ಬಳಿಯ ದೇವಗರಿ ಗ್ರಾ ಪಂ ವ್ಯಾಪ್ತಿಯಲ್ಲಿನ ಇನ್ನೊಂದು ಗುಡ್ಡ ಕುಸಿದಿದೆ.
ಹೊಳಗದ್ದೆಯಲ್ಲಿ ಹಾದು ಹೋಗಿರುವ ಹೆದ್ದಾರಿ ಮೇಲೆ ಗುಡ್ಡದ ಮಣ್ಣು ಬೀಳುತ್ತಿದೆ. ಅದನ್ನು ತೆರವು ಮಾಡುವ ಕೆಲಸ ಸಹ ಮುಂದುವರೆದಿದ್ದು, ಹೆದ್ದಾರಿ ಮೇಲೆ ಸಾಲುಗಟ್ಟಿ ವಾಹನಗಳು ನಿಂತಿದ್ದವು. ಒಂದು ಭಾಗದ ಗುಡ್ಡದ ಮಣ್ಣನ್ನು ತೆರವು ಮಾಡಿ ವಾಹನ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಕಾರ್ಯಾಚರಣೆಗೆ ಮಳೆ ಅಡ್ಡಿಯಾಗಿದ್ದು, ಸಣ್ಣ ಪ್ರಮಾಣದಲ್ಲಿ ಕುಸಿತ ಮುಂದುವರೆದಿದೆ.
