ಉತ್ತರ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಅದರಲ್ಲಿಯೂ ಸಿದ್ದಾಪುರದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದೆ.
ಇದನ್ನು ಹೊರತುಪಡಿಸಿ ಜುಲೈ 18ರಂದು ಅಂಕೋಲಾ, ಕುಮಟಾ, ಭಟ್ಕಳ, ಶಿರಸಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗಿದೆ. ಕರಾವಳಿ ಭಾಗದಲ್ಲಿ ಅನಾಹುತಗಳ ಸಂಖ್ಯೆ ಹೆಚ್ಚಾಗಿದೆ. ಜುಲೈ 18ರಂದು ಒಂದೇ ದಿನ ಇಡೀ ಜಿಲ್ಲೆಯಲ್ಲಿ 1169.9ಮೀ.ಮೀ ಮಳೆಯಾಗಿದೆ. ಆ ಪೈಕಿ ಅಂಕೋಲಾದಲ್ಲಿ 131.4ಮಿ.ಮೀ, ಭಟ್ಕಳದಲ್ಲಿ 125ಮೀ.ಮೀ, ಕುಮಟಾದಲ್ಲಿ 128.1ಮೀ.ಮೀ, ಶಿರಸಿ 105.2ಮೀ.ಮೀ ಮಳೆ ಸುರಿದಿದೆ.
ಜುಲೈ 1ರಿಂದ ಈವರೆಗೆ ಸುರಿದ ತಾಲೂಕಾವಾರು ಮಳೆ ಪ್ರಮಾಣದ ಮಾಹಿತಿ ಇಲ್ಲಿದೆ.
ಮಳೆ ಜಾಸ್ತಿಯಾಗಿರುವುದರಿಂದ ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗಿದ್ದು, ಯಾವ ಅಣೆಕಟ್ಟಿನಲ್ಲಿ ಎಷ್ಟು ನೀರಿದೆ? ಎಂಬ ಮಾಹಿತಿ ಇಲ್ಲಿ ನೋಡಿ..
Discussion about this post