ಸರಾಯಿ ಕದ್ದು ಸಿಕ್ಕಿಬಿದ್ದ ನೌಕರ!
ಶಿರಸಿ: ಖಾಜಿಗಲ್ಲಿಯ `ಪಾರಿಜಾತಾ ಬಾರ್’ನಲ್ಲಿ ಸರಾಯಿ ಕಳ್ಳತನವಾಗಿದೆ!
ಅದೇ ಬಾರಿನಲ್ಲಿ ಅತ್ಯಂತ ನಂಬಿಕೆಯಿoದ ಕೆಲಸ ಮಾಡುತ್ತಿದ್ದ ನಾಗರಾಜ ವೆಂಕಟ್ರಮಣ ಮರಾಠಿ ಈ ಕಳ್ಳತನ ಮಾಡಿರುವುದಾಗಿ ಬಾರಿನ ಮ್ಯಾನೇಜರ್ ಅಂತೋನಿ ರೋಡಿಗ್ರೇಸ್ ದೂರಿದ್ದಾರೆ.
ಅಂತೋನಿ ರೋಡಿಗ್ರೆಸ್ ಗಣೇಶ ನಗರದ ಬೆನಕ ಕಾಲೋನಿಯವರು. ನಾಗರಾಜ ಮರಾಠಿ ಮತ್ತಿಗಾರ್ ಬಳಿಯ ಕೊಳಗಿಬೀಸಿನವರು. ನಾಗರಾಜ ಮರಾಠಿ ಅಗಸೇಬಾಗಿಲಿನ ಕಸ್ತೂರಿ ಹೋಟೆಲ್ ಬಳಿ ವಾಸವಿದ್ದು, ಪಾರಿಜಾತ ಬಾರಿನಲ್ಲಿ ನೌಕರಿಯಲ್ಲಿದ್ದರು. ಅತ್ಯಂತ ನಂಬಿಗಸ್ತ ಎಂದು ಹೆಸರು ಮಾಡಿದ್ದರು. ಆದರೆ, ಜುಲೈ 16ರ ಸಂಜೆ 5. 41ರಿಂದ ಜುಲೈ 17ರ ಮಧ್ಯಾಹ್ನ 12.15ರವರೆಗೆ ಬಾರಿನ ಗೌಡನ್’ನಲ್ಲಿರುವ ಸಿಸಿ ಕ್ಯಾಮರಾ ಬಂದ್ ಮಾಡಿ ಕಳ್ಳತನ ಮಾಡಿರುವ ಬಗ್ಗೆ ಆರೋಪಿಸಲಾಗಿದೆ. ಒಟ್ಟು 26880ರೂ ಮೌಲ್ಯದ `ಒರಿಜನಲ್ ಚಾಯ್ಸ್’ 7 ಬಾಕ್ಸ್’ಗಳನ್ನು ನಾಗರಾಜ ಮರಾಠಿ ಕದ್ದಿದ್ದು, ಅದನ್ನು ವಸೂಲಿ ಮಾಡಿಕೊಡಬೇಕು ಎಂದು ಅಂತೋನಿ ರೋಡಿಗ್ರೇಸ್ ಪೊಲೀಸರಿಗೆ ದುಂಬಾಲು ಬಿದ್ದಿದ್ದಾರೆ.
