6
September 28, 2026

ಗುಡ್ಡದ ಮೇಲೆ ಊರಿನ ತ್ಯಾಜ್ಯ: ಪಹರೆ ಕಾದು ಕಳ್ಳನ ಹಿಡಿದ ಜನ

ಕುಮಟಾ: ಗೋರೆ ಗುಡ್ಡದ ಮೇಲೆ ತ್ಯಾಜ್ಯ ಎಸೆದು ಪರಾರಿಯಾಗುತ್ತಿದ್ದವರ ವಿರುದ್ಧ ಪಹರೆ ಕಾದ ಊರಿನ ಜನ ಕಸ ಎಸೆಯುತ್ತಿದ್ದ ವಾಹನವನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ತ್ಯಾಜ್ಯ ಬೀಳುತ್ತಿದ್ದು, ಇದರಿಂದ ಸುತ್ತಲಿನ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗೋರೆ ಗುಡ್ಡದ ಜೊತೆ ಧಾರೇಶ್ವರದ ಗುಡಬಳ್ಳಿ ಗುಡ್ಡದಲ್ಲೂ ಪ್ಲಾಸ್ಟಿಕ್ ತ್ಯಾಜ್ಯಗಳು ಹೆಚ್ಚಾಗಿದೆ. ರಾತ್ರಿ ವೇಳೆ ದೊಡ್ಡ ದೊಡ್ಡ ವಾಹನಗಳಲ್ಲಿ ಆಗಮಿಸಿ ದುಷ್ಕರ್ಮಿಗಳು ತ್ಯಾಜ್ಯ ಬಿಡುತ್ತಿದ್ದಾರೆ. ಅದರಂತೆ ಬುಧವಾರ ರಾತ್ರಿ ತ್ಯಾಜ್ಯ ಎಸೆಯಲು ಬಂದಿದ್ದವರನ್ನು ಊರಿನವರು ಹಿಡಿದು ಪೊಲೀಸರಿಗೆ ಒಪ್ಪಿಸಿದರು.
ಈ ವೇಳೆ ವಾಹನ ಚಾಲಕ ಉದ್ದಟತನದಿಂದ ವರ್ತಿಸಿದ್ದು, ದೇವಗಿರಿ ಗ್ರಾಪಂ ಉಪಾಧ್ಯಕ್ಷ ಎಸ್.ಟಿ ನಾಯ್ಕ ಆತನನ್ನು ತರಾಟೆಗೆ ತೆಗೆದುಕೊಂಡರು.

Leave a Reply

Your email address will not be published. Required fields are marked *

You cannot copy content of this page