ಅಂಕೋಲಾದ ಶಿರೂರು ಗುಡ್ಡ ಕುಸಿತದಿಂದ ಸಾವನಪ್ಪಿದವರು ಎಷ್ಟು? ಎಂದು ಇನ್ನೂ ನಿಖರವಾಗಿ ಗೊತ್ತಾಗಿಲ್ಲ.
ಹೀಗಾಗಿ ಶವ ಹಾಗೂ ನಾಪತ್ತೆಯಾದವರ ಹುಡುಕಾಟಕ್ಕಾಗಿ ಜುಲೈ 17ರಂದು ಡ್ರೋಣ್ ಕ್ಯಾಮರಾ ನೆರವು ಪಡೆಯಲಾಗಿದೆ. ಗಂಗಾವಳಿ ತೀರದಿಂದ ಹಿಡಿದು ನದಿ, ಹಳ್ಳ, ಕೊಳ್ಳಗಳ ಅಂಚಿನಲ್ಲಿ ಡ್ರೋಣ್ ಹಾರಾಟ ನಡೆಸಿದೆ. ಉಳುವರೆ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಸಹ ಡ್ರೋಣ್ ಹಾರಿಸಿ ಕುರುಹುಗಳನ್ನು ಹುಡುಕಲಾಗಿದೆ. ಸ್ಥಳದಲ್ಲಿ ಎನ್ ಡಿ ಆರ್ ಎಫ್ ತಂಡ ಸಹ ಇದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.





Discussion about this post