ಪೊಲೀಸ್ ನೌಕರಿ ಕೊಡುವುದಾಗಿ ಯಾರಾದರೂ ಹಣ ಕೇಳುತ್ತಿದ್ದಾರಾ? ಅಥವಾ ಇನ್ಯಾವುದೇ ಆಮೀಷ ಒಡ್ಡಿದ್ದಾರಾ? ಹಾಗಾದರೆ ನೇರವಾಗಿ ಎಸ್ಪಿ’ಗೆ ಫೋನ್ ಮಾಡಿ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಘಟಕವೂ ಕಾನ್ಸಟೇಬಲ್ ಹುದ್ದೆ ನೇಮಕಾತಿ ಕರೆದಿದ್ದು, ಜುಲೈ 22ರಂದು ಧಾರವಾಡದಲ್ಲಿ ದೈಹಿಕ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಪ್ರವೇಶಪತ್ರ ಪಡೆದು, ಆ ಪತ್ರದ ಜೊತೆ ಧಾರವಾಡದ ಆರ್ ಎನ್ ಶೆಟ್ಟಿ ಕ್ರೀಡಾಂಗಣಕ್ಕೆ ಹಾಜರಾಗಬೇಕು.
ಇನ್ನೂ ಪೊಲೀಸ್ ನೇಮಕಾತಿ ಅತ್ಯಂತ ಪಾರದರ್ಶಕವಾಗಿ ನಡೆಯಲಿದೆ. ಯಾವುದೇ ದಲ್ಲಾಳಿಗಳ ಬಳಿ ಈ ಹುದ್ದೆ ಮಾರಾಟಕ್ಕೆ ಇಲ್ಲ. ಅದಾಗಿಯೂ ಯಾರಾದರೂ ನೌಕರಿ ಕೊಡುವುದಾಗಿ ನಂಬಿಸಿದರೆ ಅಂಥವರ ವಿರುದ್ದ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆಗೆ ಫೋನ್ ಮಾಡಿ.
ನಿಮ್ಮ ದೂರುಗಳ ಬಗ್ಗೆ ಅಲ್ಲಿನ ಸಿಬ್ಬಂದಿ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರಿಗೆ ವರದಿ ಮಾಡಲಿದ್ದಾರೆ.
ಪೊಲೀಸ್ ಕಂಟ್ರೋಲ್ ರೂಂ: 9480805200
ಲ್ಯಾಂಡ್ ಲೈನ್: 08382-226550
Discussion about this post