ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದ ಮಳೆ ಮುಂದುವರೆದಿದ್ದು, ಶಾಲಾ ಕಾಲೇಜುಗಳಿಗೆ ಘೋಷಿಸಿದ್ದ ರಜೆಯನ್ನು ಜುಲೈ 19ಕ್ಕೂ ಮುಂದುವರೆಸಲಾಗಿದೆ. ಹೀಗಾಗಿ ಈ ಶುಕ್ರವಾರ ಮಕ್ಕಳು ಹಾಗೂ ಶಿಕ್ಷಕರು ಶಾಲೆಗೆ ಬರಬೇಕಾಗಿಲ್ಲ.
ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೊಯಿಡಾ, ಹಳಿಯಾಳ, ಮುಂಡಗೋಡು ಹಾಗೂ ದಾಂಡೇಲಿ ಭಾಗದ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ, ಪಿಯುಸಿ ಹಾಗೂ ಐಟಿಐ ಕಾಲೇಜುಗಳಿಗೆ ಈ ರಜೆ ಘೋಷಣೆಯಾಗಿದೆ. ಈಗ ನೀಡಿರುವ ರಜೆಯ ಬದಲು ಬೇಸಿಗೆಯಲ್ಲಿ ಹೆಚ್ಚುವರಿಯಾಗಿ ತರಗತಿ ನಡೆಸಬೇಕು ಎಂದು ಸೂಚಿಸಲಾಗಿದೆ. ಮಕ್ಕಳ ವಿದ್ಯಾಬ್ಯಾಸಕ್ಕೆ ಯಾವುದೇ ಹಿನ್ನಡೆ ಆಗದಂತೆ ಕ್ರಮ ಜರುಗಿಸಲು ಶಿಕ್ಷಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಶುಕ್ರವಾರ ಮುಂಡಗೋಡು ಹಾಗೂ ಹಳಿಯಾಳ ತಾಲೂಕಿಗೆ ಸಹ `ಮಳೆ ರಜೆ’ಯ ಭಾಗ್ಯ ದೊರೆತಿದೆ.





Discussion about this post