ಅಂಕೋಲಾ ತಾಲೂಕಿನ ಶಿರೂರಿನ ಗುಡ್ಡ ಕುಸಿತ ಸ್ಥಳದಲ್ಲಿ ಐಷಾರಾಮಿ ಕಾರು ಕೊನೆಯದಾಗಿ ನಿಂತಿರುವ ಬಗ್ಗೆ ಜಿಪಿಎಸ್ ಮಾಹಿತಿ ಸಿಕ್ಕಿದ್ದು, ಬೆಂಜ್ ಲಾರಿ ಹಾಗೂ ಅದರ ಚಾಲಕನಿಗಾಗಿ ಶೋಧ ನಡೆಯುತ್ತಿದೆ.
ಜಿಪಿಎಸ್ ಮಾಹಿತಿ ಅನ್ವಯ ಎರಡು ದಿನದ ಹಿಂದೆಯೇ ಗುಡ್ಡದ ಕೆಳಗೆ ಟಿಂಬರ್ ಸಾಗಾಟದ ಲಾರಿ ಸಿಲುಕಿರುವುದು ಖಚಿತವಾಗಿತ್ತು. ಆದರೆ, ಈವರೆಗೂ ಅದರ ಪತ್ತೆ ಆಗಿರಲಿಲ್ಲ. ಇದೀಗ ದೊಡ್ಡ ಪ್ರಮಾಣದಲ್ಲಿ ಗುಡ್ಡದ ಮಣ್ಣನ್ನು ಬೇರೆ ಕಡೆ ಸಾಗಿಸಲಾಗಿದ್ದು ಮಣ್ಣಿನ ಅಡಿ ಸಿಲುಕಿದ್ದ ವಾಹನಗಳಿಗಾಗಿ ಶೋಧ ನಡೆಯುತ್ತಿದೆ.
ಕಾರು ಚಹ ಅಂಗಡಿಯ ಮುಂದೆ ನಿಂತಿರುವ ಅನುಮಾನ ಇದ್ದ ಹಿನ್ನಲೆ ಆ ಭಾಗದಲ್ಲಿ ಹುಡುಕಾಟ ನಡೆದಿದೆ. ಧಾರಾಕಾರ ಮಳೆಯ ನಡುವೆಯೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಎಲ್ಲವೂ ಅಂದುಕೊ0ಡತೆ ನಡೆದರೆ ಶುಕ್ರವಾರ ರಾತ್ರಿಯೊಳಗೆ ಹೆದ್ದಾರಿಯ ಮಣ್ಣು ಸ್ಥಳಾಂತರವಾಗಲಿದೆ. ಲಾರಿ ಸಿಲುಕಿಕೊಂಡಿದ್ದ ಬಗ್ಗೆ ಮಾಹಿತಿ ಪಡೆದ ರಕ್ಷಣಾ ಸಿಬ್ಬಂದಿ ಅದರ ಹುಡುಕಾಟ ನಡೆಸಿದ್ದು, ಈವರೆಗೆ ಅವಶೇಷಗಳು ಪತ್ತೆಯಾಗಿಲ್ಲ.
Discussion about this post