ಯಲ್ಲಾಪುರ: ಅರಬೈಲ್ ಅಂಚಿನ ಡಬ್ಗುಳಿಯಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಗುಡ್ಡವನ್ನು ಕಂದಾಯ ಇಲಾಖೆ ತೆರವು ಮಾಡಿದೆ.
ಯಂತ್ರೋಪಕರಣಗಳನ್ನು ಬಳಸಿ ಅಲ್ಲಿದ್ದ ಮಣ್ಣುಗಳನ್ನು ಬೇರೆ ಕಡೆ ಸಾಗಾಟ ಮಾಡಿದೆ. ಇದೀಗ ಡಬ್ಗುಳಿ ಗ್ರಾಮಕ್ಕೆ ವಾಹನಗಳ ಓಡಾಟ ಸಾಧ್ಯವಿದ್ದು, ರಸ್ತೆ ಮೇಲೆ ಮಣ್ಣಿನ ರಾಡಿ ಕೂತಿರುವುದರಿಂದ ನಿಧಾನವಾಗಿ ಚಲಿಸುವುದು ಒಳಿತು.
ಡಬ್ಗುಳಿ ಗುಡ್ಡ ಕುಸಿತದ ವಿಷಯ ಅರಿತು ತಹಶೀಲ್ದಾರ್ ಅಶೋಕ ಭಟ್ಟ, ಕಂದಾಯ ನಿರೀಕ್ಷಕಿ ಜ್ಯೋತಿ ನಾಯ್ಕ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.




Discussion about this post