ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರ ಸುರಿದ ಮಳೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಶುಕ್ರವಾರ ಮಳೆಯಾಗಿದೆ. ಶುಕ್ರವಾರ ಜಿಲ್ಲೆಯಲ್ಲಿ ಸರಾಸರಿ 98.43 ಮಿಲಿ ಮೀಟರ್ ಮಳೆ ಸುರಿದಿದೆ.
ಈ ಪೈಕಿ ಸಿದ್ದಾಪುರದಲ್ಲಿ ಅತಿ ಹೆಚ್ಚು ಅಂದರೆ 150.4 ಮೀ.ಮೀ ಮಳೆಯಾಗಿದೆ. ಶಿರಸಿಯಲ್ಲಿ 148.5 ಮಿ.ಮೀ ಹಾಗೂ ಅಂಕೋಲಾದಲ್ಲಿ 148 ಮಿ.ಮೀ ಮಳೆಯಾಗಿದೆ. ಕುಮಟಾದಲ್ಲಿ 116.2 ಮಿ.ಮೀ ಮಳೆಯಾಗಿದೆ. ಕಾರವಾರ 110.4 ಮೀ.ಮಿ ಜೊಯಿಡಾ 99.2 ಮೀ.ಮೀ ಮಳೆಯಾಗಿದೆ.
ಉಳಿದಂತೆ ಭಟ್ಕಳ 95.8 ಮೀ.ಮಿ, ದಾಂಡೇಲಿ 94.0 ಮಿ.ಮೀ ಮಳೆ ಸುರಿದಿದೆ. ಹೊನ್ನಾವರ 70.1, ಯಲ್ಲಾಪುರದಲ್ಲಿ 76.0 ಮಿ.ಮೀ ಮಳೆಯಾಗಿದೆ. ಹಳಿಯಾಳ 56.6 ಹಾಗೂ ಮುಂಡಗೋಡದಲ್ಲಿ 26.4 ಮಿ.ಮೀ ಮಳೆ ಸುರಿದಿದೆ.
ಈವರೆಗಿನ ಮಳೆ ವರದಿ ಇಲ್ಲಿ ನೋಡಿ..
ಜಲಾಶಯಗಳ ನೀರಿನ ಮಟ್ಟ:
ಮಳೆ ವ್ಯಾಪಕವಾದ ಕಾರಣ ಜಲಾಶಯಗಳ ನೀರಿನ ಮಟ್ಟ ಸಹ ಏರಿಕೆ ಕಂಡಿದೆ. ಅಣೆಕಟ್ಟುಗಳಲ್ಲಿನ ನೀರಿನ ಮಟ್ಟದ ವಿವರ ಇಲ್ಲಿ ನೋಡಿ..
Discussion about this post