ಕುಮಟಾ ತಾಲೂಕಿನಲ್ಲಿ ಶುಕ್ರವಾರ ಸುರಿದ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ.

ಸಂತೆಗುಳಿ ಗ್ರಾಮ ಪಂಚಾಯತ್ ದಿವಳ್ಳಿ ಗ್ರಾಮದ ಉಳ್ಳೂರು ಮಠ ಸಮೀಪ ಗುಡ್ಡ ಕುಸಿದಿದೆ. ಅಂದಾಜು 1ಕಿಮೀ ದೂರದವರೆಗೆ ಗುಡ್ಡ ಜಾರಿ ರಸ್ತೆಗೆ ಬಿದ್ದಿದೆ. ದೊಡ್ಡ ದೊಡ್ಡ ಗಾತ್ರದ ಮರಗಳು ಸಹ ನೆಲಕ್ಕೆ ಅಪ್ಪಳಿಸಿದೆ. ಇದರ ಪರಿಣಾಮ ಸಿದ್ದಾಪುರಕ್ಕೆ ತೆರಳುವ ಮಾರ್ಗ ಬಂದ್ ಆಗಿದ್ದು, 3 ಜೆಸಿಬಿ ಯಂತ್ರಗಳನ್ನು ಬಳಸಿ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಅಘನಾಶಿನಿ ನದಿ, ಚಂಡಿಕಾ, ಬಡಗಣಿ ಹೊಳೆ ಉಕ್ಕಿ ಹರಿದಿದೆ. ನದಿ ಅಂಚಿನ ಗ್ರಾಮಗಳಿಗೆ ನೀರು ನುಗ್ಗಿದೆ. ಕೋನಳ್ಳಿಯ ಕಡವು, ದೀವಗಿ, ಹೆಗಡೆ, ಖೈರೆ, ಕೋಡ್ಕಣಿ, ಕರ್ಕಿಮಕ್ಕಿಯಲ್ಲಿ ಕಾಳಜಿ ಕೇಂದ್ರ ತೆರೆದಿದ್ದು, ಜನ ಅಲ್ಲಿ ಸ್ಥಳಾಂತರವಾಗಿದ್ದಾರೆ.
Discussion about this post