ಗುಡ್ಡ ಕುಸಿತದಿಂದ ಸಾಕಷ್ಟು ಅವಾಂತರಗಳಿಗೆ ಕಾರಣವಾಗಿದ್ದ ಅಂಕೋಲಾದ ಸಡಗೇರಿ ಇದೀಗ ಮೊದಲಿನ ಸ್ಥಿತಿಗೆ ಮರಳುತ್ತಿದ್ದು, ` ಸಡಗೇರಿಯಲ್ಲಿ ಊರು ಬಿಟ್ಟವರು ತಮ್ಮ ಮನೆ ಸೇರಬಹುದು’ ಎಂದು ಜಿಲ್ಲಾಡಳಿತ ತಿಳಿಸಿದೆ.
ಗುಡ್ಡ ಕುಸಿತದ ಪರಿಣಾಮವಾಗಿ ಗ್ಯಾಸ್ ಟ್ಯಾಂಕರ್ ನದಿ ಪಾಲಾಗಿದ್ದು, ಅದರಲ್ಲಿದ್ದ ಅನಿಲವನ್ನು ಸಂಪೂರ್ಣವಾಗಿ ಖಾಲಿ ಮಾಡಲಾಗಿದೆ. ಅನಿಲವನ್ನು ಬೇರೆ ಟ್ಯಾಂಕರ್’ಗೆ ತಜ್ಞರು ತುಂಬಿಸಿದ್ದಾರೆ. ಸಡಗೇರಿಯಲ್ಲಿ ಹರಿಯುವ ಗಂಗಾವಳಿ ನದಿಯಲ್ಲಿ ಟ್ಯಾಂಕರ್ ಕೊಚ್ಚಿ ಹೋಗಿತ್ತು. ಮಂಗಳೂರಿನಿoದ ಅಲ್ಲಿಗೆ ಆಗಮಿಸಿದ ತಜ್ಞರು ಅಪಾಯದಲ್ಲಿರುವ ಟ್ಯಾಂಕರಿನ ಅನಿಲವನ್ನು ಹೊರ ತೆಗೆದಿದ್ದಾರೆ. ಆ ಪ್ರದೇಶವನ್ನು ಇದೀಗ ಸಂಪೂರ್ಣ ಸುರಕ್ಷಿತ ಎಂದು ಘೋಷಿಸಲಾಗಿದೆ. ಹೀಗಾಗಿ ಬೇರೆ ಬೇರೆ ಸ್ಥಳಗಳಿಗೆ ತೆರಳಿದವರು ಮನೆಗೆ ಮರಳಬಹುದು ಎಂದು ಜಿಲ್ಲಾಡಳಿತ ಹೇಳಿದೆ.
ಶಿರೂರಿನಲ್ಲಿ ಗುಡ್ಡ ಕುಸಿತದ ತೆರವು ಕಾರ್ಯಾಚರಣೆ ಮುಂದುವರೆದಿದೆ.




Discussion about this post