ವ್ಯಾಪಕ ಮಳೆ: ದೇವರ ಮೊರೆಹೋದ ಜಿಲ್ಲಾಧಿಕಾರಿ
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಅಪಾರ ಹಾನಿ ಉಂಟಾಗುತ್ತಿದ್ದು, ಜನರ ಒಳತಿಗೆ ಪ್ರಾರ್ಥಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ದೇವರ ಮೊರೆ ಹೋಗಿದ್ದಾರೆ.
ಶುಕ್ರವಾರ ಸಂಜೆ ಗೋಕರ್ಣ ಆತ್ಮಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದ ಅವರು ಪ್ರಕೃತಿಯ ಮುನಿಸು ಕಡಿಮೆ ಮಾಡುವಂತೆ ಪ್ರಾರ್ಥಿಸಿಕೊಂಡರು. ವಿಶೇಷ ಆರತಿ ಬೆಳಗಿ ಅವರು ದೇವರಲ್ಲಿ ಪ್ರಾರ್ಥಿಸಿದರು. ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯ ಮಹಾಬಲ ಉಪಾಧ್ಯ ಪೂಜೆ ನೆರವೇರಿಸಿದರು. ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.
