ಅಣಲಗಾರ ಯಕ್ಷವೈಭವಕ್ಕೆ ಕ್ಷಣಗಣನೆ
ಯಲ್ಲಾಪುರ: ಜುಲೈ 20ರ ರಾತ್ರಿ 8.30ಕ್ಕೆ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಅಣಲಗಾರ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ ಹಾಗೂ ಅತಿಥಿ ಕಲಾವಿದರು ಈ ಆಟ ಆಡಲಿದ್ದಾರೆ. `ಶ್ರೀರಂಗ ತುಲಾಭಾರ ಹಾಗೂ ಪುರುಷಮೃಗ’ ಪ್ರದರ್ಶನ ನಡೆಯಲಿದ್ದು, ಹಿಮ್ಮೇಳದಲ್ಲಿ ಪ್ರಸನ್ನ ಭಟ್ಟ ಬಾಳ್ಕಲ್, ಅನಂತ ಹೆಗಡೆ ದಂತಳಿಗೆ, ನರಸಿಂಹ ಭಟ್ಟ ಹಂಡ್ರಮನೆ, ಅನಿರುದ್ಧ ವರ್ಗಾಸರ, ಗಣೇಶ ಗಾಂವ್ಕರ ಕನಕನಹಳ್ಳಿ ಭಾಗವಹಿಸಲಿದ್ದಾರೆ.
ತಿಮ್ಮಪ್ಪ ಹೆಗಡೆ ಶಿರಳಗಿ, ಭಾಸ್ಕರ ಗಾಂವ್ಕರ ಬಿದ್ರೆಮನೆ, ಗಣಪತಿ ಭಾಗ್ವತ ಶಿಂಬಳಗಾರ, ಈಶ್ವರ ಭಟ್ಟ ಅಂಸಳ್ಳಿ, ಸದಾಶಿವ ಭಟ್ಟ ಮಲವಳ್ಳಿ, ವಿನಯ ಬೇರೊಳ್ಳಿ, ವಿನಾಯಕ ಭಟ್ಟ ಶೇಡಿಮನೆ, ನಾಗರಾಜ ಭಟ್ಟ ಕುಂಕಿಪಾಲ, ಪ್ರವೀಣ ತಟ್ಟೀಸರ, ದೀಪಕ ಭಟ್ಟ ಕುಂಕಿ, ಶ್ರೀಧರ ಅಣಲಗಾರ, ರಾಮಕೃಷ್ಣ ಭಟ್ಟ ಕಂಚನಗದ್ದೆ, ಅಚ್ಯುತ ಭಟ್ಟ ಅಣಲಗಾರ ಪಾತ್ರ ನಿರ್ವಹಿಸಲಿದ್ದಾರೆ.
ನೀವು ಬನ್ನಿ, ನಿಮ್ಮವರನ್ನೂ ಕರೆತನ್ನಿ!
